ಗೂನಡ್ಕದ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳು ವಿಜ್ಞಾನ ಚರ್ಚಾ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

0

ಬೆಂಗಳೂರಿನ ಕೆ. ಐ. ಎಸ್. ಎ ( ಕರ್ನಾಟಕ ಐಸಿಎಸ್ಸಿ ಸ್ಕೂಲ್ಸ್ ಅಸೋಸಿಯೇಷನ್ )ಇವರು ಆಯೋಜಿಸಿರುವಂತಹ ರಾಜ್ಯ ಮಟ್ಟದ ವಿಜ್ಞಾನ ಚರ್ಚಾ ಸ್ಪರ್ಧೆಯಲ್ಲಿ ಗೂನಡ್ಕದ ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳಾದ ಏಳನೇ ತರಗತಿಯ ಫ಼ರಾ ಖದೀಜ ಇ ಎ ಮತ್ತು ಹತ್ತನೇ ತರಗತಿ ಖುಶಿ ಎ ಎ ಇವರು ಆಯ್ಕೆಯಾಗಿರುತ್ತಾರೆ.

ಸೆ.23ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.