ತ್ರೋಬಾಲ್ ನಲ್ಲಿ ಯೇನೆಕಲ್ಲು ಸ.ಹಿ.ಪ್ರಾ. ಶಾಲಾ ಹುಡುಗರ ತಂಡ ಜಿಲ್ಲಾ ಮಟ್ಟಕ್ಕೆ

0

ಸೆ. 21ರಂದು ಸ.ಮಾ.ಹಿ ಪ್ರಾಥಮಿಕ ಶಾಲೆ ಅರಂತೋಡಿನಲ್ಲಿ ನಡೆದ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಯೇನೆಕಲ್ಲು ಪ್ರಾಥಮಿಕ ಶಾಲೆಯ ಹುಡುಗರ ತಂಡ ಪ್ರಥಮ ಸ್ಥಾನ ಪಡೆದು ಸೆ. 27ರಂದು ಯೇನೆಕಲ್ಲು ಪ್ರೌಢಶಾಲೆಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದೆ. ಜಿಲ್ಲಾ ಮಟ್ಟದಲ್ಲಿ ಭಾಗವಹಿಸಲಿದೆ. ಇವರಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಕಮಲ ತರಬೇತಿ ನೀಡುತ್ತಿದ್ದಾರೆ.