
ಸುಳ್ಯ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ಭಾಗವಾದ ಯೋಗ ಕ್ರೀಡಾ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮವು ಯುವಜನ ಸಂಯುಕ್ತ ಮಂಡಳಿಯಲ್ಲಿ ಸೆ.22 ರಂದು ನಡೆಯಿತು.
ಕಾರ್ಯಕ್ರಮವನ್ನು ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪ್ರವೀಣ್ ಕುಮಾರ್ ಜಯನಗರ ಉದ್ಘಾಟಿಸಿದರು.

ನೋಡೆಲ್ ಅಧಿಕಾರಿ ಯುವಜನ ಸೇವಾ ಕ್ರೀಡಾ ಇಲಾಖೆಯ ದೇವರಾಜ್ ಮುತ್ಲಾಜೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಯೋಗ ಶಿಕ್ಷಕಿ ಶ್ರೀಮತಿ ರಶ್ಮಿ ಉಮಾ ಶಂಕರ್ ಪುತ್ತೂರು ಯೋಗ ಕ್ರೀಡಾ ಸ್ಪರ್ಧೆಯ ಮಾಹಿತಿ ನೀಡಿದರು. ಯುವಜನ ಸಂಯುಕ್ತ ಮಂಡಳಿ ನಿರ್ದೇಶಕ ಪ್ರಸಾದ್ ಕಾಟೂರು ಉಪಸ್ಥಿತರಿದ್ದರು. ಯುವಜನ ಸಂಯುಕ್ತ ಮಂಡಳಿ ಉಪಾಧ್ಯಕ್ಷ ವಿಜಯಕುಮಾರ್ ಉಬರಡ್ಕ ವಂದಿಸಿದರು. ಯೋಗ ಕ್ರೀಡಾ ಸ್ಪರ್ಧೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು.















ವಿಜೇತರಾದವರು: ಸಾಂಪ್ರದಾಯಿಕ ಹುಡುಗರ ವಿಭಾಗ ಪ್ರಥಮ ವಿನೋಬನಗರ ವಿವೇಕಾನಂದ ಶಾಲೆಯ ವಿದಾತ್, ದ್ವಿತೀಯ ಕೆ.ವಿ.ಜಿ.ಐ.ಪಿ.ಎಸ್ ನ ಆಶ್ರೀತ್ ಅಮೆಮನೆ, ಹುಡಗಿಯರ ವಿಭಾಗದಲ್ಲಿ ಪ್ರಥಮ ಸೈಂಟ್ ಜೋಸೆಫ್ ನ ಸೋನಾ ಅಡ್ಕಾರ್, ದ್ವಿತೀಯ ವಿನೋಬನಗರ ವಿವೇಕಾನಂದ ಶಾಲೆಯ ಕೃಷ್ಮಾ ಪಿ.ಎಚ್
ಹಾಗೂ ಕಲಾತ್ಮಕ ವಿಭಾಗದಲ್ಲಿ ಹುಡುಗರು ಪ್ರಥಮ ರೋಟರಿ ಶಾಲೆಯ ತನುಷ್ ಕೆ.ಆರ್, ದ್ವಿತೀಯ ಜ್ಞಾನದೀಪ ಎಲಿಮಲೆ ಶಾಲೆಯ ತನುಷ್ ಎಂ.ಎಚ್ ಹಾಗೂ ಹುಡುಗಿಯರ ವಿಭಾಗದಲ್ಲಿ ಪ್ರಥಮ ಸೈಂಟ್ ಜೋಸೆಫ್ ಶಾಲೆಯ ಹಾರ್ದಿಕಾ, ದ್ವಿತೀಯ ವಿನೋಬನಗರ ವಿವೇಕಾನಂದ ಶಾಲೆಯ ಕ್ಷಮಾ ಪಡೆದುಕೊಂಡಿದ್ದಾರೆ.









