ಫೂಟ್ಬಾಲ್ ಪಂದ್ಯಕೂಟದಲ್ಲಿ‌ ಗ್ರೀನ್ ವ್ಯೂ ಶಾಲೆ ರಾಜ್ಯಮಟ್ಟಕ್ಕೆ

0

ಮಂಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಪುಟ್ಬಾಲ್ ಪಂದ್ಯದಲ್ಲಿ ಚಾಂಪಿಯನ್ ಸುಳ್ಯದ ವಿದ್ಯಾಸಂಸ್ಥೆ

ಸೆ.23 ರಂದು ಮಂಗಳೂರಿನ ಸುರತ್ಕಲ್ ನಲ್ಲಿ ನಡೆದ ಜಿಲ್ಲಾ ಮಟ್ಟದ ಪುಟ್ಬಾಲ್ ಪಂದ್ಯಕೂಟದಲ್ಲಿ ಗ್ರೀನ್ ವ್ಯೂ ಆಂಗ್ಲ ಮಾಧ್ಯಮ ಶಾಲೆ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಗ್ರೀನ್ ವ್ಯೂ ತಂಡ ಅತ್ಯುತ್ತಮ ಆಟ ಪ್ರದರ್ಶಿಸಿ ಫೈನಲ್ ಪಂದ್ಯದಲ್ಲಿ ಮಂಗಳೂರು ಉತ್ತರ ತಂಡವನ್ನು ಸೋಲಿಸಿ ವಿಭಾಗಿಯ ರಾಜ್ಯ ಮಟ್ಟಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.

ಅತ್ಯುತ್ತಮ ಆಲ್ ರೌಂಡರ್ ಪ್ರಶಸ್ತಿಯನ್ನು ಹತ್ತನೇ ತರಗತಿ ಶಾಝಿನ್ ಪಡೆದುಕೊಂಡಿದ್ದಾರೆ.

ಗ್ರೀನ್ ವ್ಯೂ ತಂಡದ ಈ ಅದ್ಬುತ ವಿಜಯಕ್ಕೆ ಕಾರಣರಾದ ವಿದ್ಯಾರ್ಥಿಗಳಿಗೂ ದೈಹಿಕ ಶಿಕ್ಷಣ ಶಿಕ್ಷಕಿ ಭವ್ಯ ಕೆ ಯವರಿಗೆ ಶಾಲಾ ಆಡಳಿತ ಮಂಡಳಿಯು, ಸಂಚಾಲಕರು , ಮುಖ್ಯೋಪಾದ್ಯಾಯರು ಮತ್ತು ಸರ್ವ ಸಿಬ್ಬಂದಿಗಳು ಅಭಿನಂದಿಸಿದರು.