ಸ್ಥಾಪಕ ನಿರ್ದೇಶಕ ಪಡ್ಪು ವಾಸುದೇವ ಗೌಡರಿಗೆ ಶ್ರದ್ಧಾಂಜಲಿ ಅರ್ಪಣೆ
ವಿಜಿಯಸ್ ಸೌಹಾರ್ದ ಸಹಕಾರಿ ನಿಯಮಿತ ಚಿಲಿಂಬಿ ಮಂಗಳೂರು ಇದರ 7ನೇ ವಾರ್ಷಿಕ ಮಹಾಸಭೆ ಸೆ.23ರಂದು ಅಧ್ಯಕ್ಷರಾದ ಲೋಕಯ್ಯ ಗೌಡ ಕೆ.ಯವರ ಅಧ್ಯಕ್ಷತೆಯಲ್ಲಿ ಒಕ್ಕಲಿಗ ಗೌಡರ ಭವನದ ಸಭಾಂಗಣದಲ್ಲಿ ನಡೆಯಿತು.















ವರದಿ ವರ್ಷದಲ್ಲಿ ನಿಧನರಾದ ಸಹಕಾರಿಯ ಸ್ಥಾಪಕ ನಿರ್ದೇಶಕರಾದ ಪಡ್ಪು ವಾಸುದೇವ ಗೌಡ ಮತ್ತು ಸದಸ್ಯರುಗಳಾದ ಗಿರೀಶ್ ಮತ್ತು ಅಚ್ಯುತ ಗೌಡರವರಿಗೆ ನಿರ್ದೇಶಕರಾದ ರಾಮಣ್ಣ ಗೌಡ ಕೆ. ಶ್ರದ್ಧಾಂಜಲಿ ನುಡಿ ಸಲ್ಲಿಸಿ ಸಂತಾಪ ಸೂಚಿಸಲಾಯಿತು. ಸದಸ್ಯರಿಗೆ ಲಾಭಾಂಶದಲ್ಲಿ ಶೇ.15 ಡಿವಿಡೆಂಡ್ ಘೋಷಿಸಲಾಯಿತು.
ಶ್ರೀಮತಿ ಅನಿತಾ ರಾಮಣ್ಣ ಗೌಡ ಪ್ರಾರ್ಥಿಸಿದರು.ನಿರ್ದೇಶಕರಾದ ಡಿ.ಪಿ.ಸದಾನಂದ ಸ್ವಾಗತಿಸಿ, ಶ್ರೀಮತಿ ಕಲಾವತಿ ಬಿ.ವಂದಿಸಿದರು. ವೇದಿಕೆಯಲ್ಲಿ ನಿರ್ದೇಶಕರುಗಳಾದ ಶ್ರೀಮತಿ ಸೌಮ್ಯ ಸುಕುಮಾರ್, ಶ್ರೀಮತಿ ಕಲಾವತಿ ಬಿ.,ಕೆ.ರಾಮಣ್ಣ ಗೌಡ, ಗುರುದೇವ ಯು.ಬಿ., ಶ್ರೀಮತಿ ಗಾಯತ್ರಿ ವಿ.ಗೌಡ, ಸದಾನಂದ ಗೌಡ ಡಿ.ಬಿ., ಕಾರ್ಯನಿರ್ವಹಣಾಧಿಕಾರಿ ನಿತ್ಯಾನಂದ ಉಪ್ಪಳಿಕೆ ಉಪಸ್ಥಿತರಿದ್ದರು.









