ಪಂಜ: ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ

0

ಮಾಡಬಾಗಿಲು ಕಂಬಳ ಆನಂದ ಗೌಡ ಟ್ರಸ್ಟ್ ಕಂಬಳ 8ನೇ ವರ್ಷದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಅ.2 ರಂದು ಸರಕಾರಿ ಪದವಿ ಪೂರ್ವ ಕಾಲೇಜುನಲ್ಲಿ ಜರುಗಿತು ಮಾಡಬಾಗಿಲು ಟ್ರಸ್ಟ್ ಅಧ್ಯಕ್ಷ ಬಿ.ಎಂ. ಆನಂದ ಗೌಡ ಕಂಬಳ ಸಭಾಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಇ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಪಂಜ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವೆಂಕಪ್ಪ ಗೌಡ ಕೇನಾಜೆ, ಮುಖ್ಯ ಶಿಕ್ಷಕ ಟೈಟಸ್ ವರ್ಗೀಸ್, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಚೀನಪ್ಪ ಕಾಣಿಕೆ, ಎಸ್ ಡಿ ಎಂ ಸಿ ಅಧ್ಯಕ್ಷ ಗಣೇಶ್ ಜೋಯಿಸ ಹಾಗೂ ಟ್ರಸ್ಟಿಗಳಾದ ಶ್ರೀಮತಿ ಬಿ.ಎಂ.ಗಂಗಮ್ಮ, ಶ್ರೀಮತಿ ಸುಧಾ ಯಶವಂತ ಕುದುಂಗು, ಹೇಮಂತ್ ಕುಮಾರ್ ಕಂಬಳ , ದಾಸ್ ಪ್ರಕಾಶ್ ಕಂಬಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ದಾಸ್ ಪ್ರಕಾಶ್ ಕಂಬಳ ಪ್ರಾಸ್ತಾವಿಕಗೈದು,ಸ್ವಾಗತಿಸಿದರು. ಶಿಕ್ಷಕ ಪುರಂದರ ಪನ್ಯಾಡಿ ನಿರೂಪಿಸಿದರು. ಟೈಟಸ್ ವರ್ಗೀಸ್ ವಂದಿಸಿದರು.