ಇಸ್ರೇಲ್ ನಲ್ಲಿರುವ ಕಲ್ಲುಗುಂಡಿಯ ದಂಪತಿ ಸುರಕ್ಷಿತ

0

ಬಾರ್ಡರ್ ನಲ್ಲಿ ಯುದ್ದ ನಡೆಯುವ ಶಬ್ದ ಕೇಳಿಸುತ್ತಿರುವ ಬಗ್ಗೆ ಮಾಹಿತಿ

ಇಸ್ರೇಲಿನಲ್ಲಿ ಹಮಾಸ್ ಉಗ್ರರು ನಡೆಸುತ್ತಿರುವ ಯುದ್ದದಿಂದಾಗಿ ಇಸ್ರೇಲಿಯನ್ನರು ಸಂಕಷ್ಟಕ್ಕೆ ಸಿಲುಕಿದ್ದು, ಇಸ್ರೇಲಿನಲ್ಲಿರುವ ಕಲ್ಲುಗುಂಡಿಯ ದಂಪತಿ ಸುರಕ್ಷಿತವಾಗಿರುವ ಮಾಹಿತಿ ಲಭಿಸಿದೆ.

ಕಲ್ಲುಗುಂಡಿ ಮಹಾವಿಷ್ಣುಮೂರ್ತಿ ದೈವಸ್ಥಾನದ ಬಳಿಯಿರುವ ಮೌರಿಸ್ ಕ್ರಾಸ್ತ ಹಾಗೂ ಶ್ರೀಮತಿ ಐರಿನ್ ದಂಪತಿಯ ಹಿರಿಯ ಪುತ್ರಿ ಶ್ರೀಮತಿ ವಿಜೇತ ಕ್ರಾಸ್ತ ಹಾಗೂ ಅವರ ಪತಿ ಜಾನ್ಸನ್ ಅವರು ಇಸ್ರೇಲಿನಲ್ಲಿ ಉದ್ಯೋಗಿಯಾಗಿದ್ದು, ಅವರು ಸುರಕ್ಷಿತವಾಗಿರುವ ಕುರಿತು ಅವರ ತಂದೆ ಮೌರಿಸ್ ಕ್ರಾಸ್ತ ಅವರು ಸುದ್ದಿಗೆ ತಿಳಿಸಿದ್ದಾರೆ.


ವಿಜೇತ ಹಾಗೂ ಅಳಿಯ ಜಾನ್ಸನ್ ಅವರು ದಿನದಲ್ಲಿ ಮೂರ್ನಾಲ್ಕು ಬಾರಿ ದೂರವಾಣಿ ಮೂಲಕ ನಮ್ಮಲ್ಲಿ ಮಾತನಾಡುತ್ತಿದ್ದಾರೆ. ಅಲ್ಲಿ ಅವರಿಗೆ ಬಂಕರ್ ವ್ಯವಸ್ಥೆಯೂ ಇದೆ. ಅವರಿರುವ ಜಾಗಕ್ಕಿಂತ ಸುಮಾರು ದೂರದ ಬಾರ್ಡರ್ ನಲ್ಲಿ ಯುದ್ದ ನಡೆಯುವ ವೇಳೆ ಶಬ್ದ ಕೇಳಿಸುತ್ತಿದೆ ನಮಗೆ ಯಾವುದೇ ಅಪಾಯವಿಲ್ಲ ಎಂದು ಅವರು ದೂರವಾಣಿ ಮೂಲಕ ತಿಳಿಸಿದ್ದಾರೆ ಎಂದು ಮೌರಿಸ್ ಕ್ರಾಸ್ತ ಅವರು ‘ಸುದ್ದಿ’ಗೆ ತಿಳಿಸಿದ್ದಾರೆ.