ಅ.15 (ನಾಳೆ): ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ದಸರಾ ಗೊಂಬೆ ಉತ್ಸವ

0

ಸಾರ್ವಜನಿಕರಿಗೆ ಮೂರು ದಿನಗಳ ಕಾಲ ನೋಡಲು ಮುಕ್ತ ಅವಕಾಶ

ಸುಳ್ಯದ ವರ್ತಕರ ಭವನದಲ್ಲಿ ಕಾರ್ಯಚರಿಸುತ್ತಿರುವ ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಅ.15 ರಂದು ದಸರಾ ಗೊಂಬೆ ಉತ್ಸವ ಕಾರ್ಯಕ್ರಮ ನಡೆಯಲಿದೆ.

ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸುದ್ದಿ ಚಾನೆಲ್ ಸುಳ್ಯ ಇದರ ಮುಖ್ಯಸ್ಥ ದುರ್ಗಾ ಕುಮಾರ್ ನಾಯರ್ ಕೆರೆ, ಅತಿಥಿಗಳಾಗಿ ಡಾ.ಸಾಯಿ ಗೀತಾ ಜ್ಞಾನೇಶ್ ಆಗಮಿಸಲಿದ್ದಾರೆ.

ಗೊಂಬೆ ಉತ್ಸವದಲ್ಲಿ ಹಲವಾರು ಗೊಂಬೆಗಳನ್ನಟ್ಟು , ಶಾಲಾ ಪುಟಾಣಿ ಗಳು, ಪೋಷಕರೊಂದಿಗೆ ಆಚರಿಸಲಾಗುವುದು ಹಾಗೂ ಸಾರ್ವಜನಿಕರಿಗೆ ಗೊಂಬೆ ಉತ್ಸವವನ್ನು ನೋಡಲು ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯ ತನಕ ಮೂರು ದಿನಗಳವರೆಗೆ ಅವ ಕಾಶವಿದೆ ಎಂದು ಸಂಸ್ಥೆಯ ಸಂಚಾಲಕಿ ಶ್ರೀಮತಿ ಗೀತಾಂಜಲಿ ಟಿ.ಜಿ.ರವರು ತಿಳಿಸಿದ್ದಾರೆ.