ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ತೋಟಗಾರಿಕಾ ಇಲಾಖೆಯಲ್ಲಿ ಔಷಧಿ ಲಭ್ಯ

0

ಇನ್ನಿತರ ಸೌಲಭ್ಯಗಳು : ಅ.27 ಕೊನೆಯ ದಿನ

೨೦೨೩-೨೪ ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯ ತೆಂಗಿನಲ್ಲಿ ಕೊಕ್ಕೋ ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ಇತರೇ ವರ್ಗದ ರೈತರಿಗೆ ೨೭೪೦ ಗಿಡ ಲಭ್ಯವಿದ್ದು ಶೇ.೪೦ರ ಸಹಾಯಧನ ರೂ. ೧೮,೦೦೦/- (ಪ್ರತಿ ಹೆಕ್ಟರ್ ಗೆ) ದೊಂದಿಗೆ ಉಚಿತವಾಗಿ ಸಸಿ ವಿತರಿಸಲಾಗುವುದು ಆಸಕ್ತರು ನಿಗದಿತ ಅರ್ಜಿ ನಮೂನೆಯೊಂದಿಗೆ ಆರ್‌ಟಿಸಿ, ಆಧಾರ್, ಪಾಸ್ ಪುಸ್ತಕ ಜೆರಾಕ್ಸ್ ಪ್ರತಿಯನ್ನು ಅ.೨೭ ರೊಳಗೆ ನೀಡುವುದು.


೨೦೨೩-೨೪ ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯ ತೆಂಗು ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ತಾಲೂಕಿಗೆ ೫.೬೬ ಹೆ ಇತರೇ ರೈತರಿಗೆ ಹಾಗೂ ೪.೮ ಹೆ ಪರಿಶಿಷ್ಟ ಪಂಗಡ ರೈತರಿಗೆ ಗುರಿಯಿದ್ದು, ಸಹಾಯಧನದಲ್ಲಿ ಉಚಿತವಾಗಿ ತೆಂಗಿನ ಸಸಿ ವಿತರಿಸಲಾಗುವುದು ಕನಿಷ್ಟ ೦.೫ ಎಕ್ರೆ ಯಿಂದ ೧ ಹೆ. ವರೆಗೆ ಪ್ರದೇಶ ವಿಸ್ತರಣೆ ಕೈಗೊಳ್ಳಬಹುದು ಆಸಕ್ತ ರೈತರು ಅಗತ್ಯ ದಾಖಲೆಗಳೊಂದಿಗೆ ಅ.೨೭ ರೊಳಗೆ ಅರ್ಜಿ ಸಲ್ಲಿಸುವುದು.


೨೦೨೩-೨೪ ನೇ ಸಾಲಿನ ಅಡಿಕೆ ಎಲೆ ಚುಕ್ಕೆ ರೋಗ ನಿಯಂತ್ರಣ ಕಾರ್ಯಕ್ರಮದಡಿ ೧೮೦ ಲೀಟರ್ ಇತರೇ ರೈತರಿಗೆ ೧೧೫ ಲೀಟರ್ ಪರಿಶಿಷ್ಟ ಜಾತಿ ಹಾಗೂ ೫೭ ಲೀಟರ್ ಪರಿಶಿಷ್ಟ ಪಂಗಡ ರೈತರಿಗೆ ಪ್ರೋಪಿಕೊನಜಾಲ್ ಔಷಧಿ ಲಭ್ಯವಿದ್ದು, ಎಲೆಚುಕ್ಕೆ ರೋಗ ಬಾಧಿತ ಅಡಿಕೆ ತೋಟದ ರೈತರು ನಿಗದಿತ ಅರ್ಜಿಯೊಂದಿಗೆ ಆರ್‌ಟಿಸಿ, ಆಧಾರ್, ಪಾಸ್ ಪುಸ್ತಕದ ಜೆರಾಕ್ಸ್ ಹಾಗೂ ಜಾತಿ ಪ್ರಮಾಣ ಪತ್ರ (ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ), ಕಚೇರಿಯಲ್ಲಿ ನೀಡಿ ಪಡೆದುಕೊಳ್ಳಬಹುದು ಹಾಗೂ ಪಂಜ ಹೋಬಳಿ ರೈತರಿಗೆ ಪರಿವಾರ ಪಂಜ ರೈತ ಉತ್ಪಾದಕ ಕಂಪೆನಿಯಿಂದಲು ಅರ್ಜಿ ನೀಡಿ ಪಡೆದುಕೊಳ್ಳಬಹುದು.


೨೦೨೩-೨೪ ನೇ ಸಾಲಿನ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಖಾದ್ಯ ತೈಲಗಳ ಅಭಿಯಾನ ತಾಳೆ ಬೆಳೆ ಯೋಜನೆಯಡಿ ತಾಲೂಕಿಗೆ ಪರಿಶಿಷ್ಟ ಜಾತಿ ರೈತರಿಗೆ ೦.೭೮ ಲಕ್ಷ ಹಾಗೂ ಪರಿಶಿಷ್ಟ ಪಂಗಡ ರೈತರಿಗೆ ೦.೫೭೩ ಲಕ್ಷ ಅನುದಾನ ಲಭ್ಯವಿದ್ದು ನೀರಾವರಿ ವ್ಯವಸ್ಥೆ ಇರುವಂತಹ ಆಸಕ್ತ ರೈತರು ಆರ್‌ಟಿಸಿ, ಆರ್‌ಡಿ ಸಂಖ್ಯೆ ಹೊಂದಿರುವ ಜಾತಿ ಪ್ರಮಾಣ ಪತ್ರ, ಆಧಾರ್ ಪಾಸ್ ಪುಸ್ತಕದ ಪ್ರತಿಯೊಂದಿಗೆ ಅ.೨೭ ರೊಳಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸುವುದು.
೨೦೨೩-೨೪ ನೇ ಸಾಲಿನ PMKSY ತೊಟಗಾರಿಕೆ ಬೆಳೆಗಳಿಗೆ ಹನಿ/ನೀರಾವರಿ ಘಟಕ ಅಳವಡಿಸಲು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ರೈತರಿಗೆ ಶೇ.೯೦ ರಂತೆ ೧ ಎಕ್ರೆಗೆ ಗರಿಷ್ಟ ರೂ.೨೩,೫೦೦ ಸಹಾಯಧನ ಲಭ್ಯವಿದ್ದು, ಆಸಕ್ತ ರೈತರು ಅ.೨೭ ರೊಳಗೆ ಹೆಸರು ನೋಂದಾಯಿಸುವಂತೆ ತಿಳಿಸಿದೆ. ತಾಲೂಕಿಗೆ ಪರಿಶಿಷ್ಟ ಜಾತಿ ರೈತರಿಗೆ ೩.೧೦ ಲಕ್ಷ ಹಾಗೂ ಪರಿಶಿಷ್ಟ ಪಂಗಡ ರೈತರಿಗೆ ೦.೮೩ ಲಕ್ಷ ಅನುದಾನ ಲಭ್ಯವಿರುತ್ತದೆ.


ಸುಳ್ಯ ತಾಲೂಕಿನಲ್ಲಿ ಅಡಿಕೆ, ತೆಂಗು, ಜಾಯಿಕಾಯಿ ಒಣಗಿಸಲು ನಿರ್ಮಿಸುವ ಕಡಿಮೆ ವೆಚ್ಚದ ಕೊಳವೆಯಾಕಾರದ (Solar Tunnel Dryer) ಪಾಲಿಟನೆಲ್ ಡ್ರೈಯರ್ ರಚನೆಗೆ ಅಗತ್ಯವಿರುವ HDPE-UV ಶೀಟ್ ಗಳ ಖರೀದಿಗೆ ಪ್ರತಿ ಚದರ ಮೀಟರ್ ಗೆ ಶೇಕಡಾ ೪೦ರ ರೂ.೨೦ ಸಹಾಯಧನ ನೀಡಲಾಗುವುದು. ಮಳೆಯಿಂದ ಕೊಯ್ಲು ಮಾಡಿದ ಉತ್ಪನ್ನ ರಕ್ಷಿಸಿ ಒಣಗಿಸಲು ರೈತರು ಹೊಸದಾಗಿ ಪಾಲಿಟನೆಲ್ ನಿರ್ಮಿಸುವಲ್ಲಿ ಅಥವಾ ಈಗಾಗಲೇ ಇರುವ ಘಟಕಕ್ಕೆ ಹೊಸದಾಗಿ HDPE-UV ಶೀಟ್ ಅಳವಡಿಸಿದಲ್ಲಿ ಸಹಾಯಧನ ಪಡೆಯಲು ಹೊಸದಾಗಿ ಖರೀದಿಸಿದ HDPE-UV ಶೀಟ್ ನ (GST Bill), ಅರ್ಜಿ ಪಹಣಿ ಪತ್ರ, ಆಧಾರ್ ಪ್ರತಿ ಹಾಗೂ ಬ್ಯಾಂಕ್ ಪಾಸ್ ಪುಸ್ತಕ ಪ್ರತಿಯನ್ನು ತೋಟಗಾರಿಕೆ ಇಲಾಖೆಗೆ ಅ.೩೧ ರೊಳಗೆ ಸಲ್ಲಿಸಲು ಕೋರಿದೆ.