ಆಲೆಟ್ಟಿ ಸದಾಶಿವ ದೇವಸ್ಥಾನಕ್ಕೆ ಗುಂಡ್ಯ ಜನನಿ ಕ್ಲಬ್ ವತಿಯಿಂದ ಚೆಯರ್ ಕೊಡುಗೆ

0

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನಕ್ಕೆ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ವತಿಯಿಂದ 30 ಫೈಬರ್ ಚೆಯರ್ ನ್ನು ಕೊಡುಗೆಯಾಗಿ ಇಂದು ನೀಡಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ರವರಿಗೆ ಕ್ಲಬ್ ಅಧ್ಯಕ್ಷ ತೀರ್ಥಕುಮಾರ್ ವಾಲ್ತಾಜೆ ಯವರು ಚೆಯರ್ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಸಹ ಅರ್ಚಕ ರಘುನಾಥ ಕಡಂಬಳಿತ್ತಾಯ, ಸೇ. ಸ.ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ, ಆಲೆಟ್ಟಿ ಸೊಸೈಟಿ ಉಪಾಧ್ಯಕ್ಷ ಸುಧಾಕರ ಆಲೆಟ್ಟಿ, ಕ್ಲಬ್ಬಿನ ಸ್ಥಾಪಕಾಧ್ಯಕ್ಷ ಮಾಧವ ನಾಯ್ಕ್ ಎಲಿಕ್ಕಳ, ಗೌರವಾಧ್ಯಕ್ಷ ಲತೀಶ್ ಗುಂಡ್ಯ, ಉಪಾಧ್ಯಕ್ಷ ನಿತಿನ್ ಗುಂಡ್ಯ, ಕಾರ್ಯದರ್ಶಿ ನಾಗರಾಜ್ ಬಡ್ಡಡ್ಕ, ಖಜಾಂಜಿ ವಿಷ್ಣು ಪ್ರಸಾದ್ ಗುಂಡ್ಯ, ಸದಸ್ಯರಾದ ಸತೀಶ್ ಕುಲಾಲ್ ಆಲೆಟ್ಟಿ, ರೋಹಿತ್ ಕುಡೆಕಲ್ಲು, ರೂಪಾನಂದ ಗುಂಡ್ಯ, ಗೋಪಾಲ ಗುಂಡ್ಯ ಮತ್ತಿತರರು ಉಪಸ್ಥಿತರಿದ್ದರು. ಭಜನಾ ಸಂಘದ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ವಂದಿಸಿದರು.