ನ.12: ಪೆರಾಜೆ ಬಂಟೋಡಿ ಅಗ್ನಿ ಯುವಕ ಮಂಡಲದ ವತಿಯಿಂದ ಗ್ರಾಮಸ್ಥರ ಕ್ರೀಡಾಕೂಟ

0

ಪೆರಾಜೆ ಗ್ರಾಮದ ಬಂಟೋಡಿ ಅಗ್ನಿ ಯುವಕ ಮಂಡಲದ ವತಿಯಿಂದ ದೀಪಾವಳಿ ಪ್ರಯುಕ್ತ ಸಾರ್ವಜನಿಕ ಪುರುಷರ ಮುಕ್ತ ಹಗ್ಗ ಜಗ್ಗಾಟ ಮತ್ತು ಗ್ರಾಮಸ್ಥರ ಕ್ರೀಡಾಕೂಟವು ನ.12 ರಂದು ಪೆರಾಜೆ ಜ್ಯೋತಿ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ.

ಬೆಳಿಗ್ಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಪೆರಾಜೆ ಗ್ರಾಮದ ಪುರುಷರಿಗೆ ಮತ್ತು ಮಹಿಳೆಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾಕೂಟಗಳು ನಡೆಯಲಿದ್ದು, ವಿಶೇಷವಾಗಿ ಸಾರ್ವಜನಿಕ ಪುರುಷರ ಮುಕ್ತ ಹಗ್ಗಜಗ್ಗಾಟ ನಡೆಯಲಿದೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ.