ಸುಳ್ಯದ ಸೈಂಟ್ ಬ್ರಿಜಿಡ್ಸ್ ಚರ್ಚ್ ನ ಕಥೋಲಿಕ್ ಸಭಾ ಸುಳ್ಯ ಘಟಕದ ಭಾಷಣ ಸ್ಪರ್ಧೆಯು ಇತ್ತೀಚೆಗೆ ಸೈಂಟ್ ಜೋಸೆಫ್ ಮೆಸ್ ಹಾಲ್ ನಲ್ಲಿ ನಡೆದಿದ್ದು ಎರಡನೇ ತರಗತಿಯಿಂದ ಪಿಯುಸಿವರೆಗಿನ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆದಿದ್ದು ಅಂತಿಮ ಫಲಿತಾಂಶ ನು ಪ್ರಕಟವಾಗಿ ವಿಜೇತ ಸ್ಪರ್ಧಾಳುಗಳಿಗೆ ಪ್ರಶಸ್ತಿ ಪತ್ರ ಹಾಗೂ ಟ್ರೋಫಿಯನ್ನು ಸೈಂಟ್ ಬ್ರೆಜಿಡ್ಸ್ ಶಾಲಾ ಸಭಾಂಗಣದಲ್ಲಿ ರೆ.ಫಾ. ವಿಕ್ಟರ್ ಡಿಸೋಜ ಅವರ ಸಮ್ಮುಖದಲ್ಲಿ ಕಥೋಲಿಕ್ ಸಭಾ ಅಧ್ಯಕ್ಷರಾದ ಗಾಡ್ ಫ್ರೀ ಮೊಂತೆರೋ ವಿತರಿಸಿದರು.















ಈ ಸಂದರ್ಭದಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ನವೀನ್ ಮಚಾದೊ, ಕಾರ್ಯದರ್ಶಿ ಜೂಲಿಯಾನ ಕ್ರಾಸ್ಥ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೆಥೋಲಿಕ್ ಸಭಾ ಕಾರ್ಯದರ್ಶಿ ಸಂತೋಷ್ ಕ್ರಾಸ್ತ, ಸದಸ್ಯರುಗಳಾದ ಪ್ರಸನ್ನ ಪೀಟರ್, ಜಾನ್ ಬಾಪ್ಟಿಸ್ಟ್ ಡಿಸೋಜಾ, ವೆಲಂಕಣಿ ಪೀಟರ್, ಶಾಲಾ ಮುಖ್ಯೋಪಾಧ್ಯಾಯರಾದ ಸಿ. ಅಂಥೋನಿಮೇರಿ, ಸಿ. ಮೆಟ್ಟಿಲ್ದ, ಕ್ರೈಸ್ತ ಶಿಕ್ಷಣ ಶಿಕ್ಷಕ ಶಿಕ್ಷಕಿಯರು ಈ ಸಂದರ್ಭದಲ್ಲಿ ಹಾಜರಿದ್ದರು.









