ಭಿನ್ನ ಸಾಮರ್ಥ್ಯದ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಅಕ್ಷಯ್ ಕೆ.ಸಿ.

0

ದಿ.ಡಾ.ಕುರುಂಜಿ ವೆಂಕಟ್ರಮಣ ಗೌಡರ ಮೊಮ್ಮಗ ಹಾಗೂ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಚರ್ ಅಕ್ಷಯ್ ಕೆ.ಸಿ.ಯವರು ತಮ್ಮ 33 ನೇ ವರ್ಷದ ಹುಟ್ಟುಹಬ್ಬವನ್ನು ಸುಳ್ಯದಲ್ಲಿರುವ ಎಂ.ಬಿ.ಫೌಂಡೇಶನ್‌ನ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆಯಾದ ಸಾಂದೀಪ್ ಶಾಲೆಯಲ್ಲಿ ಆಚರಿಸಿಕೊಂಡರು.

ಅಕ್ಷಯ್ ಕೆ.ಸಿ.ಯವರ ತಾಯಿ ಹಾಗೂ ಅಕಾಡೆಮಿ ಉಪಾಧ್ಯಕ್ಷೆ ಶ್ರೀಮತಿ ಶೋಭಾ ಚಿದಾನಂದ, ಅಕಾಡೆಮಿ ನಿರ್ದೇಶಕಿ ಹಾಗೂ ಅಕ್ಷಯ್ ಸಹೋದರಿ ಡಾ.ಐಶ್ವರ್ಯ ಗೌತಮ್ ಜೊತೆಯಲ್ಲಿದ್ದರು.
ಹುಟ್ಟುಹಬ್ಬದ ಪ್ರಯುಕ್ತ ಭಿನ್ನ ಸಾಮರ್ಥ್ಯದ ಮಕ್ಕಳ ಮನರಂಜನೆಗಾಗಿ ಮೆಜಿಶಿಯನ್ ಪಾಂಗಾಳ ಗೋಪಾಲಕೃಷ್ಣ ಶೆಣೈ ಅವರಿಂದ ಮ್ಯಾಜಿಕ್ ಪ್ರದರ್ಶನ ನಡೆಯಿತು. ಭಿನ್ನ ಸಾಮರ್ಥ್ಯದ ಮಕ್ಕಳ ಜೊತೆ ಕೇಕ್ ಕತ್ತರಿಸಿಕೊಂಡು ಅವರಿಗೆ ಕೇಕ್ ತಿನ್ನಿಸಿ ಅಕ್ಷಯ್ ಮತ್ತು ಕುಟುಂಬಿಕರು ಸಂಭ್ರಮ ಪಟ್ಟರು. ಬಳಿಕ ಊಟದ ವ್ಯವಸ್ಥೆ ಏರ್ಪಡಿಸಲಾಗಿತ್ತು.

ಎಂ.ಬಿ.ಫೌಂಡೇಶನ್ ಅಧ್ಯಕ್ಷ ಎಂ.ಬಿ.ಸದಾಶಿವ, ಸಾಂದೀಪ್ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಹರಿಣಿ ಸದಾಶಿವ, ಶ್ರೀಮತಿ ಪುಷ್ಪಾ ರಾಧಾಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.