ದುಗಲಡ್ಕ :ಯಾದವ ಸಭಾ ನೂತನ ಪ್ರಾದೇಶಿಕ ಸಮಿತಿ ರಚನೆ

0


ದುಗಲಡ್ಕ ಯಾದವ ಸಭಾ ನೂತನ ಪ್ರಾದೇಶಿಕ ಸಮಿತಿಯನ್ನು ಡಿ.3ರಂದು ದುಗಲಡ್ಕದ ಶ್ರೀ ದುಗಲಾಯ ಸಭಾಭವನದಲ್ಲಿ ರಚಿಸಲಾಯಿತು.

ಅಧ್ಯಕ್ಷರಾಗಿ ದಿನೇಶ್ ದುಗಲಡ್ಕ, ಕಾರ್ಯದರ್ಶಿಯಾಗಿ ಪ್ರವೀಣ್ ಕುಮಾರ್ ಮುಂಡೋಕಜೆ, ಕೋಶಾಧಿಕಾರಿಯಾಗಿ ಬಾಬು ಮಣಿಯಾಣಿ ದುಗಲಡ್ಕ, ಉಪಾಧ್ಯಕ್ಷರಾಗಿ ಸಂಧ್ಯ ರಾಜೇಶ್, ಜೊತೆ ಕಾರ್ಯದರ್ಶಿಯಾಗಿ ಸಂತೋಷ್ ಮುಂಡೋಕಜೆ, ತಾಲೂಕು ಸಮಿತಿ ಪ್ರತಿನಿಧಿಯಾಗಿ ರಾಘವ ಮಣಿಯಾಣಿ ಮುಂಡೋಕಜೆ, ಚಂದು ಮಣಿಯಾಣಿ, ಲತೀಶ್ ಡಿ. ಎಸ್, ಯಶೋಧ ಬಾಳೆಗುಡ್ಡೆ, ಶ್ರೀಮತಿ ಲೀಲಾ ಬಾಬು ಮಣಿಯಾಣಿ ದುಗಲಡ್ಕ, ರೂಪೇಶ್ ಯಾದವ್, ಗೋಪಾಲ ಈಶ್ವರಡ್ಕ, ಶಿವಕುಮಾರ್ ಈಶ್ವರಡ್ಕ, ಕೃಷ್ಣ ಮಣಿಯಾಣಿ ಯದುಕುಲ, ವಿನೋದ್ ದುಗಲಡ್ಕ, ನಾರಾಯಣ ಮಣಿಯಾಣಿ ನೀರಬಿದಿರೆ ಮೊದಲಾದವರನ್ನು ಆಯ್ಕೆಮಾಡಲಾಯಿತು.

ವೇದಿಕೆಯಲ್ಲಿ ತಾಲೂಕು ಸಮಿತಿ ಅಧ್ಯಕ್ಷ ಕರುಣಾಕರ ಹಾಸ್ಪರೆ ಮತ್ತು ದುಗಲಡ್ಕ ಪ್ರಾದೇಶಿಕ ಸಮಿತಿ ಸದಸ್ಯರು ಉಪಸ್ಥಿತರಿದ್ದರು.