ಅಂಜಲಿ ಮೊಂಟೆಸ್ಸರಿ ಸ್ಕೂಲ್‌ನಲ್ಲಿ ಪೋಷಕರ ಸಭೆ

0

ಶಾಲೆಯ ಅಭಿವೃದ್ಧಿಯ ಕುರಿತು ಪೋಷಕರೊಂದಿಗೆ ಮುಕ್ತವಾಗಿ ಚರ್ಚೆ

ಸುಳ್ಯದ ವರ್ತಕರ ಭವನದಲ್ಲಿ ಕಾರ್ಯಚರಿಸುತ್ತಿರುವ ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಡಿ.9 ರಂದು ಪೋಷಕರ ಸಭೆ ನಡೆಯಿತು.
ಸಭೆಯಲ್ಲಿ ಶಾಲಾ ಸಂಚಾಲಕಿ ಗೀತಾಂಜಲಿ ಟಿ. ಜಿ. ಯವರು ಶಾಲೆಯ ಶೈಕ್ಷಣಿಕ ವಿಚಾರದ ಕುರಿತು ಮಾತನಾಡಿ ಮುಂದಿನ ತಿಂಗಳು ನಡೆಯಲಿರುವ ಶಾಲಾ ವಾರ್ಷಿಕೋತ್ಸವದ ಕುರಿತು ಮಾಹಿತಿ ನೀಡಿದರು. ಹಾಗೂ ಶಾಲೆಯ ಅಭಿವೃದ್ಧಿಯ ಕುರಿತು ಪೋಷಕರೊಂದಿಗೆ ಮುಕ್ತವಾಗಿ ಮಾತಾನಾಡಿದರು.

ಸಂಸ್ಥೆಯ ಅಧ್ಯಕ್ಷ ಶುಭಕರ ಬಿ.ಸಿ. ಮಾತನಾಡಿ ಶಾಲೆಯ ಅಭಿವೃದ್ಧಿಗೆ ಸಹಕಾರ ಕೋರಿ, ಧನ್ಯವಾದ ಗೈದರು.
ಬಳಿಕ ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಪೋಷಕರಿಗೆ ಕ್ರೀಡಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು. ವೇದಿಕೆಯಲ್ಲಿ ಪೋಷಕ ಪ್ರತಿನಿಧಿ ಸುಶಾನ್, ಶಿಕ್ಷಕಿ ನಿರ್ಮಲಾ ಉಪಸ್ಥಿತರಿದ್ದರು. ಸಹಾಯಕಿ ಶ್ವೇತಾ ಸಹಕರಿಸಿದರು.