ದೇವಚಳ್ಳ-ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ

0

ಗ್ರಾಮ ಪಂಚಾಯತ್ ದೇವಚಳ್ಳ, ಲಯನ್ಸ್ ಕ್ಲಬ್ ಸುಳ್ಯ, ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರು, ಆರೋಗ್ಯ ಇಲಾಖೆ ,ಭಾರತೀಯ ಅಂಚೆ ಇಲಾಖೆ ಪುತ್ತೂರು ,ಚಿರಾಯು ಸ್ಪೋರ್ಟ್ಸ್ ಮತ್ತು ಆರ್ಟ್ಸ್ ಕ್ಲಬ್ ಮಾವಿನಕಟ್ಟೆ ,ಅಮರ ಸಂಘಟನಾ ಸಮಿತಿ ರಿಜಿಸ್ಟರ್ ಸುಳ್ಯ, ಗ್ರಾಮವನ್ ಮಾವಿನಕಟ್ಟೆ ,ಮತ್ತು ಒಡಿಯೂರು ಸ್ವಸಹಾಯ ಸಂಘ ದೇವಚಳ್ಳ ಇವರುಗಳ ಜಂಟಿ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ ,ಆರೋಗ್ಯ ತಪಾಸಣಾ ಶಿಬಿರ, ಆಧಾರ ಕಾರ್ಡು ಪರಿಸ್ಕರಣೆ ,ಈ ಶ್ರಮ ಕಾರ್ಡ್ ನೋಂದಣಿ ಮತ್ತು ಹಿರಿಯರ ಗುರುತು ಚೀಟಿ ನೋಂದಣಿ ಕಾರ್ಯಕ್ರಮವು ದೇವಚಳ್ಳ ಗ್ರಾಮ ಪಂಚಾಯತ್ ವಠಾರದಲ್ಲಿ ಜರುಗಿತು.

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ವಹಿಸಿದ್ದರು. ಡಾ. ಕುಲದೀಪ್ ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಕೊಲ್ಲಮೊಗ್ರುರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಪುತ್ತೂರು ರೋಟರಿ ಕ್ಲಬ್ಬಿನ ಅಧ್ಯಕ್ಷರು ಬ್ಲಡ್ ಬ್ಯಾಂಕಿನ ಮುಖ್ಯಸ್ಥರು ಆದ ರೋಟೇರಿಯನ್ ಜಯರಾಜ್ ಭಂಡಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸುಳ್ಯ ಲಯನ್ಸ್ ಕ್ಲಬ್ ನ ಅಧ್ಯಕ್ಷ ವೀರಪ್ಪಗೌಡ ಕಣ್ಕಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ 103ನೇ ಬಾರಿ ರಕ್ತದಾನ ಮಾಡುತ್ತಿರುವ ಶೈಲೇಶ್ ಅಂಬೆಕಲ್ಲುರನ್ನು ಸನ್ಮಾನಿಸಲಾಯಿತು.


ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗುರುಪ್ರಸಾದ್ ಚಿರಾಯು ಸ್ಪೋರ್ಟ್ಸ್ ಅಂಡ್, ಚಿರಾಯು ಸ್ಪೋರ್ಟ್ಸ್ ಎಂಡ್ ಆರ್ಟ್ಸ್ ಕ್ಲಬ್ಬಿನ ಅಧ್ಯಕ್ಷರಾದ ಪ್ರವೀಣ್ ಮಾವಿನಕಟ್ಟೆ, ಅಮರ ಸಂಘಟನಾ ಸಮಿತಿಯ ಅಧ್ಯಕ್ಷ ಸಾತ್ವಿಕ್ ಮಡಪ್ಪಾಡಿ, ಲಯನ್ಸ್ ಕಾರ್ಯದರ್ಶಿ ಲಯನ್ ದೊಡ್ಡಣ್ಣ ಬರೆಮೇಲು, ಪಂಚಾಯತ್ ಸದಸ್ಯರುಗಳ ಜಿಲ್ಲಾಧ್ಯಕ್ಷರಾದ ಲಯನ್ ಹರೀಶ್ ರೈ ಉಬರಡ್ಕ ,ಪಂಚಾಯತ್ ಸದಸ್ಯರುಗಳಾದ ಪ್ರಶಾಂತ್ ಮೆದು ಹಾಗೂ ದುರ್ಗಾದಾಸ್ ಮೆತ್ತಡ್ಕ ರವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು ಶ್ರೀ ಪ್ರವೀಣ್ ರವರು ಧನ್ಯವಾದಗಳು ನೀಡಿದ್ದು ರಾಜೇಶ್ ರವರು ಕಾರ್ಯಕ್ರಮ ನಿರೂಪಣೆ ಮಾಡಿದರು
.

ರಕ್ತದಾನ ಶಿಬಿರದಲ್ಲಿ ಒಟ್ಟು 47 ಜನ ರಕ್ತದಾನ ಮಾಡಿದ್ದುಶೈಲೇಶ್ ಅಂಬೇ ಕಲ್ಲು 103ನೇ ಬಾರಿ ರಕ್ತದಾನ ಮಾಡಿದರೆ ರಾಜೇಶ್ ರವರು 60ನೇ ಬಾರಿ ರಕ್ತದಾನ ಮಾಡಿದರು ಲಯನ್ಸ್ ಸದಸ್ಯರಾದ ಲಯನ್ ಹರೀಶ್ ರಕ್ತದಾನ ಮಾಡಿದ್ದು ಆ ಭಾಗದ ಕರ್ತವ್ಯದಲ್ಲಿ ಇದ್ದ ಪೊಲೀಸ್ ಕಾನ್ ಸ್ಟೇಬಲ್ ಆಕಾಶ್ ರವರು ಸಹ ರಕ್ತದಾನ ಮಾಡಿದ್ದು ಎಲ್ಲರಿಗೂ ಪ್ರೇರಣೆಯಾಯಿತು. ತಾಲೂಕು ವೈದ್ಯಾಧಿಕಾರಿ ಡಾ. ನಂದಕುಮಾರ್ ರವರು ಭೇಟಿ ನೀಡಿ ಸಮಯೋಚಿತ ಮಾರ್ಗದರ್ಶನವನ್ನು ನೀಡಿದರು.

ಗ್ರಾಮದ ಹೆಚ್ಚಿನ ಜನರು ಭಾಗವಹಿಸಿ ಆರೋಗ್ಯ ತಪಾಸಣೆ, ರಕ್ತವರ್ಗೀಕರಣ ಪರೀಕ್ಷೆ ,ಈ ಶ್ರಮ ಕಾರ್ಡು ನೋಂದಣಿ, ಮತ್ತು ಹಿರಿಯ ನಾಗರಿಕರ ಕಾರ್ಡ್ ನೋಂದಣಿ ಮಾಡಿಸಿಕೊಂಡರು .ಪುತ್ತೂರು ರೋಟರಿ ಕ್ಲಬ್ಬಿನ ಪೂರ್ವ ಅಧ್ಯಕ್ಷರಾದ ರೋಟೆರಿಯನ್ ಜೇವಿಯರ್ ಡಿಸೋಜಾ ಸುಳ್ಯ ಲಯನ್ಸ್ ಕ್ಲಬ್ ನ ಪ್ರಥಮ ಉಪಾಧ್ಯಕ್ಷರಾದ ಲಯನ್ ರಾಮಕೃಷ್ಣ ರೈ, ಲಯನ್ ರಾಮಚಂದ್ರ ಪಲ್ಲ ತಡ್ಕ, ಲಯನ್ ವೆಂಕಟ್ರ ಮಣ ಮೆದು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಂಚಾಯತ್ ಸಿಬ್ಬಂದಿಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು