ಈ ಸಾವು ನ್ಯಾಯವೇ!

0

ಸೋಣಂಗೇರಿ – ಸುಬ್ರಹ್ಮಣ್ಯ ರಸ್ತೆಯ ದೊಡ್ಡತೋಟದಲ್ಲಿ ಬಿಎಸ್ ಎನ್ ಎಲ್ ಕೇಬಲ್ ಅಳವಡಿಸಲು ಡ್ರಿಲ್ ಮಾಡುವ ಉದ್ದೇಶದಿಂದ ಹೊಂಡ ತೆಗೆದಿದ್ದು ಈ ಹೊ‌ಡಕ್ಕೆ ದನವೊಂದು ಬಿದ್ದು ಸಾವೀಗೀಡಾದ ಘಟನೆ ಇಂದು‌ ವರದಿಯಾಗಿದೆ.

ದೊಡ್ಡತೋಟ ಪೇಟೆಯಲ್ಲಿ ಬಿಎಸ್‌ ಎನ್ ಎಲ್ ಕೇಬಲ್ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಇದಕ್ಕಾಗಿ ಡ್ರಿಲ್‌ ಮಾಡಲು ಮೂರ್ನಾಲ್ಕು ಕಡೆಗಳಲ್ಲಿ ಹೊಂಡ ತೆಗೆದಿರಿಸಲಾಗಿದೆ. ಇಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸದ ಕಾರಣ ಇದೀಗ ಅನಾಹುತ ಸಂಭವಿಸಿದೆ.

ಇದೇ ಪರಿಸರದಲ್ಲಿ ಶಾಲಾ ಮಕ್ಕಳು ಸಂಚರಿಸುವುದರಿಂದ ಸಂಬಂಧಪಟ್ಟವರು ಸೂಕ್ತ ಮುಂಜಾಗ್ರತಾ ಕ್ರಮ ಅಳವಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.