ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಲಕ್ಷದೀಪ ಹಿನ್ನಲೆ

0

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಲಕ್ಷದೀಪದ ಹಿನ್ನಲೆಯಲ್ಲಿ ಕುಣಿತ ಭಜನೆ ನಡೆಯಲಿದ್ದು ಶ್ರೀ ಕ್ಷೇತ್ರದಿಂದ ಭಜನಾ ತಂಡಗಳಿಗೆ ಮಾಹಿತಿಗಳನ್ನು ನೀಡಲಾಗಿದೆ.
ಭಜನಾ ತಂಡದವರು 5:00ಕ್ಕೆ ಸರಿಯಾಗಿ ದೇವಾಲಯದಲ್ಲಿ ಇರಬೇಕಾಗಿ ವಿನಂತಿ. ಬಂದ ತಕ್ಷಣ ದೇವಾಲಯದ ರಥಬೀದಿಯಲ್ಲಿರುವ ಷಣ್ಮುಖ ಅನ್ನಛತ್ರದ ಮೇಲಿನ ಮಹಡಿಯಲ್ಲಿ ಉಪಹಾರದ ವ್ಯವಸ್ಥೆ ಇದೆ. ತಮ್ಮ ತಮ್ಮ ತಂಡಗಳ ಹೆಸರು ಅಥವಾ ‘ಕುಣಿತ ಭಜನೆಗೆ ಬಂದವರು’ ಎಂದು ತಿಳಿಸಿ ನೇರವಾಗಿ ಮೇಲಿನ ಮಹಡಿಗೆ ಹೋಗಬಹುದು ಅಲ್ಲಿಗೆ ಕುಣಿತ ಭಜನೆಗೆ ಬಂದವರಿಗೆ ಮಾತ್ರ ಪ್ರವೇಶ. 6:20ಕ್ಕೆ ಸರಿಯಾಗಿ ತಾವೆಲ್ಲರು ತಮ್ಮ ತಮ್ಮ ವೃತ್ತದಲ್ಲಿ ಬಂದು ಜೋಡಣೆಯಾಗಬೇಕಾಗಿ ವಿನಂತಿ. 6:30ಕ್ಕೆ ಸರಿಯಾಗಿ ಮೈಸೂರು ರಾಮಚಂದ್ರಾಚಾರ್ ಇವರಿಂದ ಭಜನೋತ್ಸವ ಶುರುವಾಗಲಿದೆ.

ದೇವಾಲಯದ ಎದುರಿನ ರಥಬೀದಿಯ ಕೊನೆಯಲ್ಲಿ ಅಂದರೆ ಈಗಿನ ರಿಕ್ಷಾ ಪಾರ್ಕಿನ ಹತ್ತಿರ ಕುಣಿತ ಭಜನೋತ್ಸವದ ವೇದಿಕೆಯಿದೆ.1 ಮತ್ತು 2 ನಂಬರುಗಳು ವೇದಿಕೆಯ ಎದುರುಗಡೆಯ ದೊಡ್ಡ ವೃತ್ತದಲ್ಲಿ ಇರಲಿದೆ . 3ರಿಂದ 77ರ ತನಕದ ನಂಬರ್ ದೇವಾಲಯದ ಎದುರಿನ ರಥ ಬೀದಿಯಲ್ಲಿದೆ. 78ರಿಂದ 109ರ ತನಕದ ನಂಬರ್ ಭಜನೋತ್ಸವ ನಡೆಯುವ ವೇದಿಕೆ ಬಲಗಡೆಗೆ ಅಂದರೆ ವೇದಿಕೆ ಹತ್ತಿರದಿಂದ ಸುಳ್ಯ ರಸ್ತೆ ಕಡೆಯ ಸರ್ಕಲ್ ವರೆಗೆ ಇರಲಿದೆ.


ಇನ್ನುಳಿದ 110ರಿಂದ 210ರವರೆಗೆ ಸ್ಟೇಜ್ ಎದುರಿನ ರಸ್ತೆಯಾದ ಅಡ್ಡಬೀದಿಯಲ್ಲಿ(ಪೊಲೀಸ್ ಚೌಕಿಯಿಂದ ಕಾಶಿಕಟ್ಟೆವರೆಗೆ) ಇರಲಿದೆ. ಭಜಕರು ತಾವೆಲ್ಲರೂ ಈ ಭಜನಾ ಸಂಭ್ರಮದಲ್ಲಿ ಸಹಕರಿಸಬೇಕಾಗಿ ವಿನಂತಿಸಲಾಗಿದೆ.