ಯೇನೆಕಲ್ಲು: ಕುಕ್ಕಪ್ಪನಮನೆ ಮೋಹನ್ ಕುಮಾರ್ ಆತ್ಮಹತ್ಯೆ

0

ಯೇನೆಕಲ್ಲು ಗ್ರಾಮದ ಕುಕ್ಕಪ್ಪನಮನೆ ದಿ. ಮುತ್ತಪ್ಪ ಮಾಸ್ತರರ ಪುತ್ರ ಮೋಹನ್ ಕುಮಾರ್ ಕೆ.ಎಂ. ತಮ್ಮ ಮನೆಯ ಸಮೀಪದ ತೋಟದಲ್ಲಿ ಹಲಸಿನ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ವರದಿಯಾಗಿದೆ.

ಸಾಲಬಾಧೆಯೇ ಆತ್ಮಹತ್ಯೆಗೆ ಕಾರಣವೆನ್ನಲಾಗಿದೆ. ಇವರಿಗೆ 48 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ರಶ್ಮಿ, ಇಬ್ಬರು ಪುತ್ರರು, ಸಹೋದರರು, ಸಹೋದರಿಯರು, ಕುಟುಂಬಸ್ಥರನ್ನು ಅಗಲಿದ್ದಾರೆ.