ಇಂದಿನಿಂದ ಗ್ರಾಮೀಣ ಅಂಚೆ ನೌಕರರ ಮುಷ್ಕರ

0

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇಂದಿನಿಂದ ಅನಿರ್ಧಷ್ಟಾವಧಿ ವರೆಗೆ ಗ್ರಾಮೀಣ ಅಂಚೆ ನೌಕರರ ಮುಷ್ಕರ ನಡೆಯಲಿದ್ದು, ಗ್ರಾಮೀಣ ಭಾಗದಲ್ಲಿ ಅಂಚೆ ಸೇವೆ ಸ್ಥಬ್ದವಾಗಲಿದೆ.

ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಜಂಟಿ ಕ್ರಿಯಾ ಸಮಿತಿ ರಾಷ್ಟವ್ಯಾಪ್ತಿ ಮುಷ್ಕರಕ್ಕೆ ಕರೆ ನೀಡಿದ್ದು ಸುಳ್ಯ ತಾಲೂಕಿನ ಗ್ರಾಮೀಣ ಅಂಚೆ ಕಚೇರಿಗಳ ನೌಕರರು ಮುಷ್ಕರದಲ್ಲಿ ಭಾಗವಹಿಸುತ್ತಿದ್ದಾರೆ. 7 ನೇ ವೇತನ ಆಯೋಗದ ಸಂಪೂರ್ಣ ಜಾರಿ, ಕಮಲೇಶ್ ಚಂದ್ರ ಸಮಿತಿ ಶಿಫಾರಸ್ಸು ಅನುಷ್ಠಾನ, 8 ಗಂಟೆ ಕೆಲಸ, ಅವೈಜ್ಯಾನಿಕ ಟಾರ್ಗೆಟ್ ನಿಲ್ಲಿಸುವುದು, ವೈದ್ಯಕೀಯ ಸೌಲಭ್ಯ ನೀಡುವುದು, ವಿಮಾ ಸೌಲಭ್ಯ ಮತ್ತಿತರ ಬೇಡಿಕೆಗಳಿಗಾಗಿ ಮುಷ್ಕರ ನಡೆಯಲಿದೆ.


ಸುಳ್ಯ ತಾಲೂಕಿನ ಗ್ರಾಮೀಣ ಅಂಚೆ ನೌಕರರು ಕಚೇರಿ ಬಂದ್ ಮಾಡಿ ಪುತ್ತೂರು ವಿಭಾಗೀಯ ಅಂಚೆ ಕಚೇರಿ ಎದುರು ಮುಷ್ಕರ ನಡೆಸುತ್ತಿದ್ದಾರೆ
.