ಲೋಕಸಭಾ ಚುನಾವಣೆ : ಸುಳ್ಯ‌ ವಿಧಾನಸಭಾ ಕ್ಷೇತ್ರದಲ್ಲಿ ಶೇ.83 ಮತದಾನ

0

ಲೋಕಸಭಾ ಚುನಾವಣೆ ಮುಕ್ತಾಯಗೊಂಡಿದ್ದು, ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಶೇ.83ಮತದಾನವಾಗಿದೆ.

ಬೆಳಗ್ಗೆ 7 ಗಂಟೆಗೆ ಆರಂಭಗೊಂಡ‌‌ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆ ತನಕ‌ ನಡೆಯಿತು.

ಕ್ಷೇತ್ರದಲ್ಲಿ ಒಟ್ಟು 2 ಲಕ್ಷದ 8 ಸಾವಿರದ 853 ಮತದಾರರಿದ್ದರು. ಅವರಲ್ಲಿ 1,73,354 ಮತದಾರರು ಮತ ಚಲಾಯಿಸಿದ್ದಾರೆ. ಒಟ್ಟು 233 ಬೂತ್ ಗಳಲ್ಲಿ ಮತದಾನ ನಡೆಯಿತು.

233 ಬೂತ್ ಗಳಲ್ಲಿ ಅಡ್ಡತೋಡು, ಶಾಂತಿನಗರ ಸೇರಿದಂತೆ 4 ಬೂತ್ ಗಳಲ್ಲಿ ಟೋಕನ್ ನೀಡಲಾಗಿದ್ದು ಅದರ ಲೆಕ್ಕಾಚಾರ ಪೂರ್ತಿಯಾಗಿದ್ದು ಒಟ್ಟು ಶೇ.83 ಫಲಿತಾಂಶ ದಾಖಲಾಗಿದೆ.