ಕುರುಂಜಿ ಗುಡ್ಡೆ : ಮರ ಕಡಿಯುವಾಗ ವೇಳೆ ದುರಂತ – ಸಾವು

0

ಸುಳ್ಯದ ಕುರುಂಜಿ ಗುಡ್ಡೆಯಲ್ಲಿ ವ್ಯಕ್ತಿಯೋರ್ವರು ಮರ ಕಡಿಯುವ ಸಂದರ್ಭದಲ್ಲಿ ಮರದ ಕೊಂಬೆಯ ನಡುವೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ತಲುಪಿದ ಸಂದರ್ಭದಲ್ಲಿ ಮೃತಪಟ್ಟ ಘಟನೆ ಇದೀಗ ವರದಿಯಾಗಿದೆ.


ಮೃತ ವ್ಯಕ್ತಿಯನ್ನು ಕೇರ್ಪಳದ ಚಿನ್ನಪ್ಪ ನಾಯ್ಕ ಎಂದು ತಿಳಿದುಬಂದಿದೆ.
ಚಿನ್ನಪ್ಪರು ಗಂಭೀರವಾಗಿ ಗಾಯಗೊಂಡ ವಿಚಾರ ತಿಳಿಯುತ್ತಿದ್ದಂತೆ ಅಚ್ಚು ಪ್ರಗತಿ ತೆರಳಿ ಅವರನ್ನು ಆಸ್ಪತ್ರೆಗೆ ಸಾಗಿಸುವ ಕೆಲಸ ಮಾಡಿದರು.


ಇದೀಗ ಮೃತ ದೇಹ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.