ಮೃತ ವ್ಯಕ್ತಿಯ ವಾರಸುದಾರರ ಪತ್ತೆಗಾಗಿ ಸುಳ್ಯ ಪೊಲೀಸ್ ಪ್ರಕಟಣೆ

0

ಸುಳ್ಯ ಪರಿವಾರಕಾನದ ರಸ್ತೆ ಬಳಿ ಅಪರಿಚಿತ ವ್ಯಕ್ತಿ ಮೃತಪಟ್ಟ ಘಟನೆಗೆ ಸಂಬಂಧಿಸಿ ವಾರಿಸುದಾರರು ಇದ್ದಲ್ಲಿ ಸುಳ್ಯ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.


ಮೃತರ ಹೆಸರು ದಿನೇಶ್ಪ್ರಾ ಯ ಅಂದಾಜು 46 ರಿಂದ 50 ವರ್ಷ ದಿನಾಂಕ 06.05.2024 ರಂದು 08:00 ಗಂಟೆಗೆ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಅರಂಬೂರು ಪರಿವಾರಕಾನ ಎಂಬಲ್ಲಿರುವ ಹನೀಫ್ ರವರ ಅಂಗಡಿಯ ಎದುರು ಅಸ್ವಸ್ಥಗೊಂಡು ಬಿದ್ದವರನ್ನು ಚಿಕಿತ್ಸೆಯ ಬಗ್ಗೆ 108 ಆ್ಯಂಬುಲೇನ್ಸ್ ವೊಂದರಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದವರು ದಿನಾಂಕ 13.05.2024 ರಂದು 10:14 ಗಂಟೆಗೆ ಮೃತಪಟ್ಟಿದ್ದು ವಾರೀಸುದಾರರ ಮಾಹಿತಿ ಇರುವುದಿಲ್ಲ .

ಇವರ ಬಗ್ಗೆ ಮಾಹಿತಿ ಇದ್ದಲ್ಲಿ ಸುಳ್ಯ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.