ಮೊದಲ ಮಳೆಗೆ ರಸ್ತೆ ಮಧ್ಯೆ ಕೊಚ್ಚಿ ಹೊಯಿತು!

0

ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಪೊಳೆಂಜ-ಕಂಬಳ ರಸ್ತೆಗೆ ಒಮ್ಮೆ ಜನ ಪ್ರತಿನಿಧಿಗಳು ಭೇಟಿ ನೀಡಿ ರಸ್ತೆಯ ಪರಿಸ್ಥಿತಿ ಪರಿಶೀಲನೆ ನಡೆಸ ಬೇಕಾಗಿದೆ.

ಪಾಂಡಿಗದ್ದೆ ಶಾಲೆಗೆ ಮತ್ತು ಅನೇಕ ಮನೆಗಳಿಗೆ ಸಂಪರ್ಕಿಸುವ ಏಕೈಕ ರಸ್ತೆಯಿದು.ಮೊದಲ ಮಳೆಗೆ ರಸ್ತೆ ಮಧ್ಯೆ ನೀರು ಹರಿದು ಹೊಂಡ ನಿರ್ಮಾಣವಾಗಿದೆ.ವಾಹನ ಸವಾರರಂತೂ ಸಂಚಾರಕ್ಕೆ ಹರ ಸಾಹಸ ಪಡುತ್ತಿರುವ ದೃಶ್ಯ ನಿತ್ಯ ಕಂಡು ಬರುತ್ತಿದೆ. ಶಾಲೆ ಆರಂಭ ಗೊಂಡಾಗ ಮಕ್ಕಳು ಈ ರಸ್ತೆಯಲ್ಲಿ ನಡೆದು ಬರಲು ಕಷ್ಟ ಪಡಲಿದ್ದಾರೆ.

ಈ ಬಗ್ಗೆ ಜನ ಪ್ರತಿನಿಧಿಗಳು ಭೇಟಿ ಪರಿಶೀಲನೆ ನಡೆಸಿ ಶಾಶ್ವತ ಯೋಜನೆ ರೂಪಿಸಿ ರಸ್ತೆ ಸಮಸ್ಯೆ ಸರಿ ಪಡಿಸ ಬೇಕಾಗಿದೆ.