ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮ ಹಾಗೂ ದುವಾ ಮಜ್ಲೀಸ್
ಮೊಗರ್ಪಣೆ ನೂರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸಾ ಎಸ್ ಬಿ ಎಸ್( ಸುನ್ನಿ ಬಾಲಸಂಘ) ವಿದ್ಯಾರ್ಥಿಗಳಿಂದ ವರ್ಷಂ ಪ್ರತಿ ಆಚರಿಸಿಕೊಂಡು ಬರುವ ತಾಜುಲ್ ಉಲಮಾ ಹಾಗೂ ನೂರುಲ್ ಉಲಮಾ ಮತ್ತು ಅಗಲಿದ ಗಣ್ಯ ನೇತಾರರ ಅನುಷ್ಮರಣೆ ಕಾರ್ಯಕ್ರಮ ಡಿ. 13 ಹಾಗೂ 14 ರಂದು ಮೊಗರ್ಪಣೆ ಮಸೀದಿ ವಠಾರದಲ್ಲಿ ನಡೆಯಿತು.

ಡಿ 13 ರಂದು ಉದ್ಘಾಟನಾ ಸಮಾರಂಭ ನಡೆದು ಮಾಂಬ್ಳಿ ವಲಿಯವರ ದರ್ಗಾದಲ್ಲಿ ಪ್ರಾರ್ಥನೆ ಮೂಲಕ ಚಾಲನೆ ನೀಡಲಾಯಿತು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಸಯ್ಯದ್ ಜೈನುಲ್ ಆಬಿದೀನ್ ತಂಙಳ್ ಜಯನಗರ ನೆರವೇರಿಸಿದರು.
ಸ್ಥಳೀಯ ಮಸೀದಿ ಮುದರ್ರಿಸ್ ಉಸ್ತಾದ್ ಅಬ್ದುಲ್ ಖಾದರ್ ಮುದುಗುಡ ಸಖಾಫಿ ಅಲ್ ಖಾಮಿಲ್ ರವರು ತಾಜುಲ್ ಉಲಾಮರವರ ಜೀವನ ಚರಿತ್ರೆಯ ಕುರಿತು ಮಾತನಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವಾಗತ ಸಮಿತಿಯ ಅಧ್ಯಕ್ಷರಾದ ಹಾಜಿ ಪಳ್ಳಿ ಕುಂಞಿ ಯವರು ವಹಿಸಿದ್ದರು.









ಖ್ಯಾತ ಬುರ್ದಾ ಗಾಯಕರಾದ ಹಂಝ ಮಹ್ಮೂದಿ ಸಂಘಡಿ ಗರಿಂದ ಬುರ್ದಾ ಹಾಗೂ ತಾಜುಲ್ ಉಲಮಾ ಚರಿತ್ರೆ ಅವಲೋಕನ ಹಾಡು ಮತ್ತು ಮಾತಿನ ಮೂಲಕ ನಡೆಯಿತು.
ಸಮಾರೋಪ ಸಮಾರಂಭ ಡಿ 14 ರಂದು ನಡೆದು ಸಯ್ಯದ್ ಕುಂಞಿ ಕೋಯ ಸಅದಿ ತಂಙಳ್ ಸುಳ್ಯ ದುವಾ ನೇತೃತ್ವವನ್ನು ವಹಿಸಿದ್ದರು.
ಅನುಸ್ಕರಣಾ ಪ್ರಭಾಷಣವನ್ನು ಖ್ಯಾತ ಧಾರ್ಮಿಕ ಪ್ರಭಾಷಣಕಾರರಾದ
ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರ್ ನಿರ್ವಹಿಸಿ ಅಗಲಿದ ಗಣ್ಯರ ದೀನಿ ಸೇವೆಗಳ ಕುರಿತು ಅವರ ಜೀವನ ಚರಿತ್ರೆಯ ಬಗ್ಗೆ ಸಂದೇಶವನ್ನು ನೀಡಿದರು.
ಮದ್ರಸಾ ಎಸ್‌ಬಿಎಸ್ ವಿದ್ಯಾರ್ಥಿಗಳು, ಪೋಷಕರು, ಜಮಾಅತಿನ ಸದಸ್ಯರುಗಳು ಭಾಗವಹಿಸಿದ್ದರು.
ವೇದಿಕೆಯಲ್ಲಿ ಜಮಾಅತ್ ಕಮಿಟಿಯ ಉಪಾಧ್ಯಕ್ಷ ಸಿ ಎಂ ಉಸ್ಮಾನ್, ಪ್ರಧಾನ ಕಾರ್ಯದರ್ಶಿ ಎಸ್ ಯು ಇಬ್ರಾಹಿಂ, ಕೋಶಾಧಿಕಾರಿ ಮಹಮ್ಮದ್ ಆದರ್ಶ, ಸ್ವಾಗತ ಸಮಿತಿಯ ಕನ್ವೀನರ್ ಜಬ್ಬಾರ್ ಲ್ಯಾಂಡ್ ಲಿಂಕ್ಸ್, ಹಾಗೂ ಜಮಾತ್ ಕಮಿಟಿಯ ಸದಸ್ಯರುಗಳು, ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.
ಸದರ್ ಮುಅಲ್ಲಿಂ ಅಬ್ದುಲ್ ಕರೀಂ ಸಕಾಫಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಮೊಅಲ್ಲಿಮರುಗಳಾದ ಹಂಝ ಸಖಾಫಿ, ಅಬ್ದುನ್ನಾಸರ್ ಸಖಾಫಿ, ಅಬೂಬಕ್ಕರ್ ಸಿದ್ದೀಕ್ ನಹೀಮಿ,ಯೂಸುಫ್ ಮದನಿ, ಅಬ್ದುಲ್ ರಶೀದ್ ಝೃನಿ, ಶಫೀಕ್ ನಹೀಮಿ, ಮೂಸಾ ಮುಸ್ಲಿಯಾರ್,ಸ್ವಾಗತ ಸಮಿತಿ ಸದಸ್ಯರುಗಳು,ಮೊಗರ್ಪಣೆ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಸದಸ್ಯರು, ಇತರ ಸಹ ಸಂಘಟನೆಗಳ ಪದಾಧಿಕಾರಿಗಳು,ಸದಸ್ಯರುಗಳು ಸಹಕರಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ನಡೆಯಿತು. ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.










