








ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ರಚನೆಯು ಜಿಲ್ಲಾ ಧಾರ್ಮಿಕ ಪರಿಷತ್ ನ ನಿರ್ಣಯದಂತೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ 1997 ರ ವಿಧಿ 25 ರನ್ವಯ ಆದೇಶ ಹೊರಡಿಸಿದ್ದು 3 ವರ್ಷಗಳ ಅವಧಿಗೆ ನೂತನ ಸಮಿತಿ ರಚನೆಗೊಂಡಿದೆ.
ಅರ್ಚಕ ಹರ್ಷಿತ್ ಬನ್ನಿಂತಾಯ,
ಜಗದೀಶ್ ಎಸ್ ಅರಂಬೂರು, ಶ್ರೀಮತಿ ಶೋಭಾ ಕುಮಾರಿ ಗುಂಡ್ಯ ಆಲೆಟ್ಟಿ, ಶ್ರೀಮತಿ ವನಜಾಕ್ಷಿ ಆಲೆಟ್ಟಿ, ಗಿರೀಶ್
ನಾರ್ಕೋಡು, ವಿಜಯಕುಮಾರ್ ಆಲೆಟ್ಟಿ, ಕಮಲಾಕ್ಷ ಕೆ. ಎಂ ಕೊಯಿಂಗಾಜೆ, ಸತೀಶ್ಚಂದ್ರ ಕಲ್ಲೆಂಬಿ, ನವೀನ್ ಕುಮಾರ್ ಗುಂಡ್ಯ ಇವರನ್ನು ಆಯ್ಕೆ ಮಾಡಲಾಗಿದೆ.
ಮುಂದಿನ ಒಂದು ವಾರದೊಳಗಾಗಿ ಆಡಳಿತಾಧಿಕಾರಿಯವರು ಸದಸ್ಯರ ಸಭೆ ಕರೆದು ಅಧ್ಯಕ್ಷರ ಆಯ್ಕೆ ಮಾಡಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ.



