ಪಶು ಇಲಾಖೆಯಲ್ಲಿ ಮೇವಿನ‌ ಬೀಜಗಳು ಲಭ್ಯ : ಇಲಾಖೆ ವೈದ್ಯಾಧಿಕಾರಿ‌ ಮಾಹಿತಿ

0

2023-24ನೇ ಸಾಲಿನ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿದ್ದು ರೈತರ ಜಾನುವಾರುಗಳಿಗೆ ಮೇವಿನ ಕೊರತೆ ಬಾರದಂತೆ ಆಸಕ್ತ ರೈತರು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ವಿವಿಧ ಪಶು ಆಸ್ಪತ್ರೆ ಮತ್ತು ಪಶು ಚಿಕಿತ್ಸಾಲಯ ಗಳನ್ನು ಸಂಪರ್ಕಿಸಿ ಉಚಿತವಾಗಿ ಮೇವಿನ ಬೀಜಗಳನ್ನು ಪಡೆದುಕೊಳ್ಳಬಹುದಾಗಿದೆ.

ಸದ್ಯಕ್ಕೆ ಇಲಾಖೆಯ ವಿವಿಧ ಸಂಸ್ಥೆಗಳಲ್ಲಿ ಆಫ್ರಿಕನ್ ಉದ್ದ ತಳಿಯ ಜೋಳ, ಹೈಬ್ರಿಡ್ ಜೋವಾರ್,ಮೇವಿನ ಅಲಸಂಡೆ ಮತ್ತು ಬಹುವಾರ್ಷಿಕ ಮೇವಿನ ಬಾಜ್ರ ಬೀಜಗಳು ಲಭ್ಯವಿವೆ.

ಆಸಕ್ತರು ತಮ್ಮ ಆಧಾರ್ ಕಾರ್ಡ್ ಆರ್ ಟಿ ಸಿ ಮತ್ತು ಫ್ರೂಟ್ ನೋಂದಣಿ ಸಂಖ್ಯೆಯೊಂದಿಗೆ ಕಚೇರಿ ಸಮಯದಲ್ಲಿ ಪಶು ಆಸ್ಪತ್ರೆ ಸುಳ್ಯ ಪಶು ಚಿಕಿತ್ಸಾಲಯ ಬೆಳ್ಳಾರೆ, ಕಳಂಜ, ಗುತ್ತಿಗಾರು ಮತ್ತು ಅರಂತೋಡು ಸಂಸ್ಥೆಗಳಿಗೆ ಸಂಪರ್ಕಿಸಿ ಬೇವಿನ ಬೀಜಗಳನ್ನು ಪಡೆದುಕೊಳ್ಳಬಹುದು.

ಬೀಜಗಳ ಲಭ್ಯತೆ ನಿಗದಿತ ಪ್ರಮಾಣದಲ್ಲೇ ಲಭ್ಯವಿದ್ದು ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು.