ಸಂಪಾಜೆ ಆರ್.ಎಂ.ಎಸ್. ಎ. ಪ್ರೌಢಶಾಲೆಯಲ್ಲಿ ಕೆವಿಜಿ ಸಾಧನೆ ಸಂಸ್ಮರಣೆ

0

ಸಂಪಾಜೆ ಆರ್. ಎಂ. ಎಸ್. ಎ. ಸರ್ಕಾರಿ ಪ್ರೌಢಶಾಲೆಯಲ್ಲಿ ಕೆವಿಜಿ ಸಾಧನೆ ಸಂಸ್ಕರಣೆ ಕಾರ್ಯಕ್ರಮವು ಡಿ.16ರಂದು ನಡೆಯಿತು.

ಪ್ರೌಢಶಾಲಾ ವಿಭಾಗದ ಎಸ್.ಡಿ.ಎಂ.ಸಿ. ಅಧ್ಯಕ್ಷ ಹೊನ್ನಪ್ಪ ಆಚಾರ್ಯ ಅವರು ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಚಿದಾನಂದ ಯು‌. ಎಸ್., ಸಂಪಾಜೆ ವರ್ತಕರ ಸಂಘದ ಅಧ್ಯಕ್ಷ ಯು.ಬಿ. ಚಕ್ರಪಾಣಿ ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು, ದಿ. ಡಾ. ಕುರುಂಜಿಯವರನ್ನು ಸ್ಮರಿಸಿದರು.‌

ಈ ಸಂದರ್ಭದಲ್ಲಿ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಆಶ್ರಯದಲ್ಲಿ 95ನೇ ಜಯಂತಿಯೋತ್ಸವದ ಸವಿ ನೆನಪಿಗಾಗಿ ಸರಕಾರಿ ಪ್ರೌಢಶಾಲೆಯ ಗ್ರಂಥಾಲಯಕ್ಕೆ ಸುಮಾರು ರೂ.3000 ಮೌಲ್ಯದ ಪುಸ್ತಕವನ್ನು ಹಸ್ತಾಂತರಿಸಿದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಚಂದ್ರಾವತಿ ಅವರು ಡಾ. ಕೆವಿಜಿ ಅವರನ್ನು ಸ್ಮರಿಸಿಕೊಂಡರು. ಕಾರ್ಯಕ್ರಮವನ್ನು ಹಿಂದಿ ಶಿಕ್ಷಕಿ ಶ್ರೀಮತಿ ಇಂದಿರಾವತಿ ನಿರೂಪಿಸಿದರು. ಶ್ರೀಮತಿ ಸವಿತಾ ಸ್ವಾಗತಿಸಿ, ಅತಿಥಿಗಳ ಕಿರುಪರಿಚಯವನ್ನು ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಸುಜಯಕುಮಾರಿ ಮಾಡಿದರು.ವಿಜ್ಞಾನ ಶಿಕ್ಷಕಿ ಶ್ರೀಮತಿ ನಯನಕುಮಾರಿ ವಂದಿಸಿದರು.