ಉಬರಡ್ಕ:ಮರಣ ಸಾಂತ್ವನ ಧನ ಸಹಾಯ ವಿತರಣೆ

0

ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿದ್ದು ಡಿ.21ರಂದು ರಂದು ನಿಧನರಾದ ಶ್ರೀಮತಿ ಕಮಲಭೋಜಪ್ಪ ಮದಕ ಇವರಿಗೆ, ಮರಣ ಸಾಂತ್ವನ ನಿಧಿ ರೂ 9000/- ವನ್ನು ಮೃತರ ಪತಿ ಬೋಜಪ್ಪ ಅವರಿಗೆ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ದಾಮೋದರ ಗೌಡ ಮದುವೆಗದ್ದೆ ವಿತರಿಸಿ, ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಹರಿಪ್ರಸಾದ್ ಪಾನತ್ತಿಲ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಉರುಂಡೆ,ಸದಸ್ಯರಾದ ಭರತ್ ಮಾಣಿಬೆಟ್ಟು,ಮತ್ತು ವೆಂಕಟರಮಣ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ್, ಮೃತರ ಪುತ್ರ ವಾಸುದೇವ ಮೊದಲಾದವರು ಉಪಸ್ಥಿತರಿದ್ದರು.