ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ವತಿಯಿಂದ ಫೌಂಡರ್ಸ್ ಡೇ

0

ಕ್ಯಾಂಪಸ್ ವೃತ್ತದಲ್ಲಿರುವ ಕೆ.ವಿ.ಜಿ. ಪ್ರತಿಮೆಗೆ ಮಾಲಾರ್ಪಣೆ

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸ್ಥಾಪಕಾಧ್ಯಕ್ಷ ದಿ.ಡಾ.ಕುರುಂಜಿ ವೆಂಕಟ್ರಮಣ ಗೌಡರ 95 ನೇ ಜನ್ಮದಿನಾಚರಣೆ ಅಂಗವಾಗಿ ಸ್ಥಾಪಕರ ದಿನಾಚರಣೆ ಇಂದು ಬೆಳಿಗ್ಗೆ ಅಕಾಡೆಮಿ ವತಿಯಿಂದ ಡಾ.ಕೆ.ವಿ.ಚಿದಾನಂದರ ನೇತೃತ್ವದಲ್ಲಿ ನಡೆಯಿತು. ಅಕಾಡೆಮಿ ಅಧ್ಯಕ್ಷ ಡಾ. ಕೆ.ವಿ. ಚಿದಾನಂದರು ಕೆ.ವಿ.ಜಿ. ಪುತ್ಥಳಿಗೆ ಹಾರಾರ್ಪಣೆಗೈದು ಪುಷ್ಪಾರ್ಚಣೆಗೈದರು.


ಕುರುಂಜಿಯವರ ಜೀವನದ ಆದರ್ಶಗಳ ಬಗ್ಗೆ ಅವರು ನೆನಪಿಸಿಕೊಂಡರು.

ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ, ಕೆ.ವಿ.ಜಿ. ಸ್ಥಾಪಕರ ದಿನಾಚರಣೆ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ. ಲೀಲಾಧರ್ ಡಿ.ವಿ. ಸ್ವಾಗತಿಸಿ, ಎನ್.ಎಂ.ಸಿ. ಪ್ರಾಂಶುಪಾಲರಾದ ರುದ್ರಕುಮಾರ್ ವಂದಿಸಿದರು. ಎನ್.ಎಮ್.ಪಿ.ಯು.ಸಿ. ಉಪನ್ಯಾಸಕಿ ಬೇಬಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.


ಅಕಾಡೆಮಿ ಉಪಾಧ್ಯಕ್ಷೆ ಶ್ರೀಮತಿ ಶೋಭಾ ಚಿದಾನಂದ, ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ., ಕಾರ್ಯದರ್ಶಿಗಳಾದ ಕೆ.ವಿ.ಹೇಮನಾಥ್ ಹಾಗೂ ಡಾ.ಐಶ್ವರ್ಯ ಗೌತಮ್, ಖಜಾಂಚಿ ಡಾ.ಗೌತಮ್, ಸದಸ್ಯರಾದ ಜಗದೀಶ್ ಅಡ್ತಲೆ ಮತ್ತು ಧನಂಜಯ ಮದುವೆಗದ್ದೆ , ಕ್ಯಾಪಸ್ ನ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರುಗಳು, ಸಿಬ್ಬಂದಿ ಉಪಸ್ಥಿತರಿದ್ದರು.