p>

ಆಲೆಟ್ಟಿ ಪಂಚಾಯತ್ ವತಿಯಿಂದ ನಾಗಪಟ್ಟಣ ಅಂಗನವಾಡಿ ಕೇಂದ್ರದ ಬಳಿಯ ಕಸ ವಿಲೇವಾರಿ

0

ಪರಿಸರವನ್ನು ಸ್ವಚ್ಚವಾಗಿಡಲು ಸ್ಥಳೀಯ ನಿವಾಸಿಗಳಿಗೆ ಸೂಚನೆ

ಸುದ್ದಿ ವರದಿಯ  ಇಂಪ್ಯಾಕ್ಟ್

ಆಲೆಟ್ಟಿ ಗ್ರಾಮದ ನಾಗಪಟ್ಟಣ ಸಿ.ಆರ್.ಸಿ.ಕಾಲನಿಯ ಬಳಿಯ ಅಂಗನವಾಡಿ ಕೇಂದ್ರದ ಹಿಂಬದಿ ಸ್ಥಳೀಯ ನಿವಾಸಿಗಳು ಕೆ.ಎಫ್.ಡಿ.ಸಿ ಯವರಿಗೆ ಸಂಬಂಧಿಸಿದ ಸ್ಥಳದಲ್ಲಿ ಕಸ ಹಾಕಿ ರಾಶಿ ಬಿದ್ದಿರುವ ಕುರಿತು ಕಳೆದ ವಾರ ಸುದ್ದಿ ವೆಬ್ ಸೈಟ್ ಮತ್ತು ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿತು.
ಕಸದ ರಾಶಿ ತುಂಬಿ ಪರಿಸರದಲ್ಲಿ ದುರ್ನಾತ ಬೀರುತ್ತಿರುವುದರಿಂದ ಪಕ್ಕದಲ್ಲಿ ಇರುವ ಅಂಗನವಾಡಿ ಮತ್ತು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ದೂರನ್ನು ಸ್ಥಳೀಯ ರು ಪಂಚಾಯತ್ ನೀಡಿದ್ದರು.

ಈ ಬಗ್ಗೆ ಮುತುವರ್ಜಿ ವಹಿಸಿದ ಸಿ.ಡಿ.ಪಿ.ಒ ಶೈಲಜಾ ರವರು ಆಲೆಟ್ಟಿ ಪಂಚಾಯತ್ ನವರಿಗೆ ಸ್ಥಳಕ್ಕೆ ಬರುವಂತೆ ತಿಳಿಸಿ ಕಸ ತುಂಬಿದ ಜಾಗವನ್ನು ವೀಕ್ಷಿಸಿದರು. ತಕ್ಷಣ ಅಲ್ಲಿ ರಾಶಿ ಬಿದ್ದಿರುವ ಕಸದ ವಿಲೇವಾರಿ ಮಾಡುವಂತೆ ಪಂಚಾಯತ್ ನವರಿಗೆ ತಿಳಿಸಿದರು. ಈ ಬಗ್ಗೆ ಕಾಳಜಿ ವಹಿಸಿದ ಪಂಚಾಯತ್ ನವರು ಕಸ ವಿಲೇವಾರಿ ಮಾಡುವುದಾಗಿ ಸ್ಥಳೀಯರಿಗೆ ಭರವಸೆ ನೀಡಿದ್ದರು. ಇದೀಗ ಪಂಚಾಯತ್ ನವರು ಭರವಸೆಯಂತೆ ಜೆ.ಸಿ.ಬಿ ತರಿಸಿ ರಾಶಿ ಬಿದ್ದಿರುವ ಕಸವನ್ನು ಮೇಲಕ್ಕೆತ್ತಿ ವಿಲೇವಾರಿ ಮಾಡುವ ಕಾರ್ಯವನ್ನು ಕೈಗೊಂಡಿರುತ್ತಾರೆ. ಪರಿಸರವನ್ನು ಸ್ವಚ್ಚವಾಗಿಡಲು ಸ್ಥಳೀಯ ನಿವಾಸಿಯವರಿಗೆ ಸೂಚಿಸಿರುವುದಲ್ಲದೆ ಮುಂದಿನ ದಿನಗಳಲ್ಲಿ ಕಸ ಹಾಕುವುದನ್ನು ತಡೆಗಟ್ಟಲು ಸಿ.ಸಿ.ಕ್ಯಾಮೆರಾ ಅಳವಡಿಸುವ ಬಗ್ಗೆ ಯೋಚಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿರುತ್ತಾರೆ.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಪಂಚಾಯತ್ ಸದಸ್ಯರು ಮತ್ತು ಪಿ.ಡಿ.ಒ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.