ಬೇಂಗಮಲೆ – ಚೊಕ್ಕಾಡಿ ರಸ್ತೆ ಕಾಮಗಾರಿಗೆ ರಸ್ತೆ ಬದಿಯ ಮರಗಳ ತೆರವು,ಕಾಮಗಾರಿಗೆ ವೇಗ

0

ಸೋಣಂಗೇರಿ – ಬೇಂಗಮಲೆ ಚೊಕ್ಕಾಡಿ ರಸ್ತೆ ಕಾಮಗಾರಿಗೆ ರಸ್ತೆ ಬದಿಯಲ್ಲಿರುವ ಮರಗಳಿಂದಾಗಿ ಅಭಿವೃದ್ದಿ ಕೆಲಸಕ್ಕೆ ತೊಡಕುಂಟಾಗಿತ್ತು.


ಈ ಬಗ್ಗೆ ಅರಣ್ಯ ಸಂಬಂಧಪಟ್ಟ ಜನ ಪ್ರತಿನಿಧಿಗಳು ಮತ್ತು ಸ್ಥಳೀಯ ಮುಖಂಡರು ಇಲಾಖೆಯವರೊಂದಿಗೆ ಮಾತನಾಡಿ ಮೇಲಾಧಿಕಾರಿಗಳ ಆದೇಶದಂತೆ ಮರಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಇದರಿಂದ ರಸ್ತೆ ಅಗಲೀಕರಣ ಕೆಲಸಕ್ಕೆ ಅನುಕೂಲವಾಗಿದೆ.


ಈ ರಸ್ತೆಯ ಅಭಿವೃದ್ಧಿಗೆ ಶಾಸಕರಾಗಿದ್ದ ಎಸ್.ಅಂಗಾರ ರೂ.2 ಕೋಟಿ ಅನುದಾನ ತರಿಸಿದ್ದರು.ಇದೀಗ ಆ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಯಾಗುತ್ತಿದ್ದು ಬೇಂಗಮಲೆ – ಚೊಕ್ಕಾಡಿ ರಸ್ತೆ ಅಗಲೀಕರಣ ಕೆಲಸ ನಡೆದಿದ್ದು ಡಾಮರೀಕರಣ ಆದಷ್ಟು ಶೀಘ್ರದಲ್ಲಿ ನಡೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.