p>

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ

0

ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ 75ನೇ ಗಣರಾಜ್ಯೋತ್ಸವವನ್ನು ಜ.26ರಂದು ಆಚರಿಸಲಾಯಿತು. ವಿದ್ಯಾರ್ಥಿಗಳ ಪಥ ಸಂಚಲನದ ಬಳಿಕ ಮೈಸೂರು ಮಾನಸಗಂಗೋತ್ರಿ ವಿಶ್ವವಿದ್ಯಾಲಯದ ಪ್ರೊಫೆಸರ್ ಗೋಪಾಲ ಮರಾಠೆ ಇವರು ಧ್ವಜಾರೋಹಣ ಮಾಡಿದರು . ಬಳಿಕ ಮಾತನಾಡಿ “ಸಂವಿಧಾನ ರಚನೆಯ ಬಳಿಕ ಭಾರತೀಯರೆಲ್ಲರೂ ನಿಜವಾಗಿಯೂ ಸ್ವತಂತ್ರರಾದರು. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ, ಸಂವಿಧಾನ ರಚನೆಗೆ ದುಡಿದ ಮಹನೀಯರನ್ನು ನಾವು ನಿತ್ಯ ಸ್ಮರಿಸಬೇಕು .

ದೇಶವನ್ನು ಇನ್ನಷ್ಟು ಪ್ರಗತಿಪಥದಲ್ಲಿ ಕಟ್ಟುವ ಕೆಲಸ ಮಾಡಬೇಕು. ಇದಕ್ಕೆಲ್ಲ ನಾವು ಬದ್ಧರಾಗೋಣ .ದೇಶ ವಿಶ್ವಗುರುವಾಗಲು , ರಾಷ್ಟ್ರೋತ್ಥಾನಕ್ಕಾಗಿ ಕಾರ್ಯತತ್ಪರಾಗೋಣ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆ ಇವರು ಮಾತನಾಡಿ “ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಎರಡು ದೇಶದ ಪ್ರಮುಖ ದಿನಗಳು. ಗಣತಂತ್ರದ ಮೂಲಕ ಪ್ರಜೆಗಳೇ ಆಡಳಿತ ನಡೆಸುವ ಪದ್ಧತಿ ಜಾರಿಗೆ ಬಂತು. ಹಿರಿಯರ ಮಾರ್ಗದರ್ಶನದೊಂದಿಗೆ ನಾವೆಲ್ಲ ದೇಶ ಕಟ್ಟುವ ಕೆಲಸ ಮಾಡೋಣ” ಎಂದರು . ಈ ಸಂದರ್ಭದಲ್ಲಿ ಮೈಸೂರು ಮಾನಸಗಂಗೋತ್ರಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಸ್ಥೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಸ್ವಾಗತಿಸಿ , ಶಿಕ್ಷಕಿ ಸವಿತಾ ಯಂ ಧನ್ಯವಾದವಿತ್ತರು.