ಮಾಜಿ ಪ್ರಧಾನಿ ಎಚ್.ಡಿ ದೇವೇ ಗೌಡ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮನ

0

ವ್ಯವಸ್ಥಾಪನಾ ಸಮಿತಿಯಿಂದ ಸ್ವಾಗತ

ದೇವಸ್ಥಾನ ಭೇಟಿ, ದೇವರ ದರ್ಶನ ಪಡೆದ ದಂಪತಿಗಳು

ಕುಕ್ಕೆ ಸುಬ್ರಹ್ಮಣ್ಯಕ್ಕೆ ಮಾಜಿ ಪ್ರಧಾನಿ ಎಚ್. ಡಿ ದೇವೇ ಗೌಡರ ಆಗಮನವಾಗಿದೆ. ಅವರೊಂದಿಗೆ ಅವರ ಪತ್ನಿ ಚೆನ್ನಮ್ಮ ಇದ್ದಾರೆ.

ಆರಂಭದಲ್ಲಿ ದೇವೆ ಗೌಡರನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಮೋಹನ ರಾಂ ಸುಳ್ಳಿ ಹೂ ಗುಚ್ಚ ನೀಡಿ ಸ್ವಾಗತಿಸಿದ್ದಾರೆ.
ದೇವಸ್ಥಾನಕ್ಕೆ ಭೇಟಿ ಇತ್ತು ದೇವರ ದರ್ಶನ ಪಡೆದರು.


ದೇವೇ ಗೌಡರು ಇಂದು ಸುಬ್ರಹ್ಮಣ್ಯದಲ್ಲಿ ವಾಸ್ತವ್ಯವಿದ್ದು ವಿಶೇಷ ಪೂಜೆ ನೆರವೇರಿಸಲಿದ್ದಾರೆ. ಅವರು ನಾಳೆಯೂ ಕ್ಷೇತ್ರದಲ್ಲಿ ಇರಲಿದ್ದು ಅಪರಾಹ್ನ ತೆರಳಲಿದ್ದಾರೆ. ಇಂದು ವ್ಯವಸ್ಥಾಪನ ಸಮಿತಿ ಸದಸ್ಯರುಗಳಾದ ವನಜಾ ಭಟ್ ಹಾಗೂ ಶೋಭ ಗಿರಿಧರ್ ,ಜೆಡಿಎಸ್ ಮುಖಂಡ ರುಗಳಾದ ಎಂ ಬಿ ಸದಾಶಿವ, ಜಾಕೆ ಮಾಧವ್ ಗೌಡ, ಸೈಯದ್ ಮೀರಾ ಸಾಹೇಬ್, ಡಾlಎ ಎ ತಿಲಕ್, ಕಿಶೋರ್ ಅರಂಪಾಡಿ, ದಿನೇಶ್ ಎಂ.ಪಿ ,ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಶಿಷ್ಟಾಚಾರ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಮತ್ತಿತರರು ಉಪಸ್ಥಿತರಿದ್ದರು.

ಚಿತ್ರ: ಶಾಂತಲ ಸ್ಟುಡಿಯೋ