














ಸುಳ್ಯ ಮೂಲದ ನಂದಿತಾ ಎಸ್.ಅವರು ನವದೆಹಲಿಯಲ್ಲಿ ಜ. 26ರಂದು ನಡೆದ ದೇಶದ 75ನೇ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕಿಯಾಗಿ ಭಾಗವಹಿಸಿದ್ದಾರೆ.
ಈಕೆ ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದ ಸುರೇಶ್ ಮತ್ತು ಶ್ರೀಮತಿ ಮಾಲತಿ ದಂಪತಿಯ ಪುತ್ರಿ.
ನಂದಿತಾ ಅವರು ಮಂಗಳೂರಿನ ಹಂಪನಕಟ್ಟೆ ವಿಶ್ವ ವಿದ್ಯಾನಿಲಯ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಎಸ್ಸಿ ಶಿಕ್ಷಣ ಪಡೆಯುತಿದ್ದಾರೆ.









