ಬೆಳ್ತಂಗಡಿ ಸುಡು ಮದ್ದು ಸ್ಫೋಟ : ಸುಳ್ಯದಲ್ಲಿ ಮುಂಜಾಗ್ರತಾ ತಪಾಸಣೆ ನಡೆಸಿದ ಅಧಿಕಾರಿಗಳು

0

ಬೆಳ್ತಂಗಡಿಯಲ್ಲಿ ಸುಡು ಮದ್ದು ಸ್ಫೋಟಗೊಂಡು ಮೂವರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಸುಳ್ಯದಲ್ಲಿ ಅಧಿಕಾರಿಗಳು ವಿವಿಧ ವ್ಯಾಪಾರ ಸಂಸ್ಥೆಗಳ ಗೋಡಾನುಗಳಿಗೆ ಭೇಟಿ ನೀಡಿ ಮುಂಜಾಗ್ರತಾ ತಪಾಸಣಾ ಕಾರ್ಯ ನಡೆಸಿದ್ದಾರೆ.

ಇಂದು ಬೆಳಿಗ್ಗೆ ಸುಳ್ಯ ತಹಶೀಲ್ದಾರ್ ಮಂಜುನಾಥ್ ರವರ ನೇತೃತ್ವದಲ್ಲಿ ತಪಾಸಣಾ ಕಾರ್ಯ ನಡೆದಿದ್ದು ಗಾಂಧಿನಗರದ ನ್ಯಾಷನಲ್ ಸ್ಟೋರ್, ಕಟ್ಟೆಕ್ಕಾರ್ಸ್ ಸ್ಟೀಲ್ ಅಂಗಡಿ, ಸಿದ್ಧಿ ವಿನಾಯಕ ಸ್ಟೋರ್ ಮುಂತಾದ ಸಂಸ್ಥೆಗಳ ಗೋಡೌನ್ ತಪಾಸಣಾ ಕಾರ್ಯ ನಡೆದು ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಮುಖ್ಯ ಅಧಿಕಾರಿ ಸುಧಾಕರ್, ಸುಳ್ಯ ವಿ ಎ ತಿಪ್ಪೇಶ್, ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.