ಪಂಜ ಜಾತ್ರೆ: ಶ್ರೀ ದೇವರ ಬ್ರಹ್ಮ ರಥೋತ್ಸವ ಸಂಭ್ರಮ

0

ರಥ ಬೀದಿಯಲ್ಲಿ ಏಕ ಕಾಲದಲ್ಲಿ ಕುಣಿತ ಭಜನೆ ಆರಂಭ

ಪಂಜ ಸೀಮೆ ದೇವಾಲಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದಲ್ಲಿ ಶ್ರೀ ದೇವರ ಬ್ರಹ್ಮರಥೋತ್ಸವ ಫೆ.6 ರಂದು (ಇಂದು)ರಾತ್ರಿ ನಡೆಯಲಿದೆ.

ಆ ಪ್ರಯುಕ್ತ ಸಂಜೆ ಭಜನಾ ತಂಡಗಳಿಂದ ರಥ ಬೀದಿಯಲ್ಲಿ ಏಕಕಾಲದಲ್ಲಿ 40 ಕ್ಕೂ ಮಿಕ್ಕಿ ಭಜನಾ ತಂಡಗಳಿಂದ ಕುಣಿತ ಭಜನೆ ನಡೆಯುತ್ತಿದೆ.

ಬಳಿಕ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗದಿಂದ ಕೀಲು ಕುದುರೆ, ಕರಗನೃತ್ಯ, ಗೊಂಬೆಯಾಟ ಆಕರ್ಷಣೆಯಾಗಲಿದೆ.