








ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಂಡೆಕೋಲು ಗ್ರಾಮದ ದೇವರಗುಂಡ ನಿವಾಸಿ ಶೇಷಪ್ಪ ಗೌಡ (62 ವ) ಎಂಬವರು ಫೆ.7ರಿಂದ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾರೆ. ಮಾನಸಿಕವಾಗಿ ಆರೋಗ್ಯದಲ್ಲಿ ಏರುಪೇರಾಗಿದ್ದ ಶೇಷಪ್ಪ ಗೌಡ ಅವರನ್ನು ಫೆ.7ರಂದು ಬೆಳಿಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಜೆ ವೇಳೆ ಅವರು ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾರೆ. ಈ ಕುರಿತು ಮನೆ ಮಂದಿ ಆಸ್ಪತ್ರೆ ವಠಾರ ಸಹಿತ ಪುತ್ತೂರು ನಗರ ಪ್ರದೇಶದಲ್ಲಿ ಫೆ.8 ಮತ್ತು 9 ರಂದು ಹುಡುಕಾಡಿದ್ದಾರೆ. ಆದರೆ ಶೇಷಪ್ಪ ಗೌಡ ಪತ್ತೆಯಾಗಿರಲಿಲ್ಲ. ಫೆ.12ರಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









