ಬಜೆಟ್ ನಲ್ಲಿ ಅತಿಥಿ ಶಿಕ್ಷಕರ ನಿರ್ಲಕ್ಷ್ಯ: ಅತಿಥಿ ಶಿಕ್ಷಕರ ಸಂಘ ಖಂಡನೆ

0

ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರು ಮಂಡಿಸಿದ ಬಜೆಟ್ ನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಅತಿಥಿ ಶಿಕ್ಷಕರ ಬಗ್ಗೆ ಹಾಗೂ ಇನ್ನಿತರ ಬೇಡಿಕೆಗಳ ಬಗ್ಗೆ ಯಾವುದೇ ನಿಲುವು ವ್ಯಕ್ತಪಡಿಸದಿರುವುದು ನಿರಾಶೆ ತಂದಿದೆ ಎಂದು ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಅತಿಥಿ ಶಿಕ್ಷಕರ ಸಂಘ ಹೇಳಿದೆ.

ಸರಕಾರದ ಈ ನಿಲುವನ್ನು ಸಂಘ ಖಂಡಿಸುತ್ತದೆ. ನಮ್ಮ ಬೇಡಿಕೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಮಸ್ತ ಅತಿಥಿ‌ ಶಿಕ್ಷಕರು ರಾಜ್ಯಾದ್ಯಂತ ಶಾಲೆ ತೊರೆಯುವುದರ ಮೂಲಕ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಂಘ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.