ದಿನವಿಡೀ ನಡೆದ ಸಂಪಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

0

9/11 ಸಮಸ್ಯೆ, ಕುಡಿಯುವ ನೀರಿನ ಕುರಿತು ವಿಸ್ತ್ರತ ಚರ್ಚೆ

ಸಂಪಾಜೆ ಗ್ರಾಮ ಪಂಚಾಯತ್ ನಲ್ಲಿ ಬೆಳಗ್ಗಿನಿಂದ ಸಂಜೆ ವರೆಗೆ ಸಾಮಾನ್ಯ ಸಭೆ ನಡೆದು ದಾಖಲೆ ಬರೆದ ಘಟನೆ ವರದಿಯಾಗಿದೆ.

ಸಂಪಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿವೇಲು ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯದರ್ಶಿ ಪದ್ಮಾವತಿ ವರದಿ ಲೆಕ್ಕ ಪತ್ರ ಮಂಡಿಸಿದರು. ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ ಸ್ವಾಗತಿಸಿದರು.

ವರದಿ ಮೇಲೆ ಚರ್ಚೆ ವೇಳೆಯಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ, ಜಗದೀಶ್ ರೈ, ಅಬೂಸಾಲಿ 9-11 ಸಮಸ್ಯೆ ಕುರಿತು ವಿಷಯ ಪ್ರಸ್ತಾಪಿಸಿದರು. ಸದಸ್ಯರ ಪ್ರಶ್ನೆ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾರವರು ನಗರ ಯೋಜನಾ ಪ್ರಾಧಿಕಾರಕ್ಕೆ 9/11 ಪ್ರತಿ ಕಳುಹಿಸಿ ನಂತರ 9/11 ಮಾಡುವುದಾಗಿ ತಿಳಿಸಿದರು. ಅದಕ್ಕೆ ಸದಸ್ಯ ಜಿ. ಕೆ. ಹಮೀದ್ ಆಕ್ಷೇಪ ಮಾಡಿ, ಪಂಚಾಯತ್ ರಾಜ್ ಇಲಾಖೆಯ ಆದೇಶ ತೋರಿಸಿ ಇಲ್ಲದಿದ್ದರೆ ಇಲ್ಲೇ ಮೊದಲಿನಂತೆ 9/11 ಮಾಡಬೇಕು ಎಂದು ಪಟ್ಟು ಹಿಡಿದರು.ಸದಸ್ಯರಾದ ಜಗದೀಶ್ ರೈ, ಅಬೂಸಾಲಿ, ರಜನಿ 9/11 ಸಿಗದೇ ಜನರಿಗೆ ಆಗುತ್ತಿರುವ ತೊಂದರೆಗಳ ಕುರಿತು ವಿವರಿಸಿದರು. ಈ ಬಗ್ಗೆ ನಿರ್ಣಯ ಮಾಡಿ ಎಂದರು ಸದಸ್ಯರುಗಳಾದ ಸುಂದರಿ ಮುಂಡಡ್ಕ, ಸವಾದ್ ಮೊದಲಾದವರು ಧ್ವನಿಗೂಡಿಸಿದರು. ಬೆಳಿಗ್ಗೆ 10.30 ಗಂಟೆಗೆ ಆರಂಭಗೊಂಡ ಸಭೆ ಸಂಜೆ 5 ಗಂಟೆಗೆ ಮುಕ್ತಾಯಕಂಡಿತು. ಚಟ್ಟೆಕಲ್ಲು ಕುಡಿಯುವ ನೀರಿನ ವಿಚಾರದಲ್ಲಿ ಸದಸ್ಯ ಜಿ. ಕೆ. ಹಮೀದ್ ಗೂನಡ್ಕ ತೀವ್ರ ಚರ್ಚೆ ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸಿ ಇಲ್ಲದಿದ್ದರೆ ಧರಣಿ ನಡೆಸುವುದಾಗಿ ಅಗ್ರಹಿಸಿ ಪಟ್ಟು ಹಿಡಿದರು.. ಕಲ್ಲುಗುಂಡಿ ಶಾಲೆಯ ಬಿಸಿಯೂಟ ಕೊಠಡಿ ಟೆಂಡರ್ ವಿಳಂಬದ ಬಗ್ಗೆ ಜಿ. ಕೆ. ಹಮೀದ್ ಚರ್ಚೆ ನಡೆದು ನಿರ್ಣಯ ಮಾಡಲಾಯಿತು.
15 ನೇ ಹಣಕಾಸು ಯೋಜನೆಯಡಿಯಲ್ಲಿ 23-24 ನೇ ಸಾಲಿನಲ್ಲಿ 30 ಲಕ್ಷ ಅನುದಾನ ಬರಬೇಕಿತ್ತು ಆದರೇ 5 ಲಕ್ಷ ರೂ ಮಾತ್ರ ಬಂದಿದೆ
ಯಾಕಾಗಿ ಬಂದಿಲ್ಲ ಅಬೂಸಾಲಿ. ಜಿ. ಕೆ. ಹಮೀದ್, ಜಗದೀಶ್ ರೈ, ಸುಂದರಿ ಪ್ರಶ್ನಿಸಿದರಲ್ಲದೆ, ನಿರ್ಣಯ ಮಾಡಿ ಕಳುಹಿಸಲು ತೀರ್ಮಾನಿಸಲಾಯಿತು. ಈ ತಿಂಗಳಿನವರೆಗೆ ಬಾಕಿ ಇರುವ ಕಾಮಗಾರಿ, ಬಿಲ್ಲು ಕೊಡಲು ಬಾಕಿ ಇರುವ ಬಗ್ಗೆ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿ ಯವರನ್ನು ಪ್ರಶ್ನಿಸಿದರು.. ಉದ್ಯೋಗ ಖಾತ್ರಿ ಕೆಲಸ ವಿಳಂಬವಾಗುತ್ತಿದೆ ಸಿಬ್ಬಂದಿಗಳು ಸರಿಯಾಗಿ ಕೆಲಸ ಮಾಡುವಂತೆ ಪ್ರತಿ ತಿಂಗಳು 6 ತಾರೀಕು ಒಳಗೆ ಸ್ಟಾಫ್ ಮೀಟಿಂಗ್ ಮಾಡಬೇಕು. ಕುಡಿಯುವ ನೀರಿನ ಬಿಲ್ ಪಾವತಿಗೆ ಅಂತಿಮ ಬಿಲ್ಲು ನೀಡಿ ಕಟ್ಟಲು ಬಾಕಿ ಇರುವವರ ಸಂಪರ್ಕ ಕಡಿತ ಮಾಡಬೇಕು ಮತ್ತಿತರ ಹಲವು ವಿಚಾರಗಳಲ್ಲಿ ಬಿರುಸಿನ ಚರ್ಚೆ ನಡೆಯಿತು. ಪಂಚಾಯತ್ ನೇತೃತ್ವದಲ್ಲಿ ಮಾರ್ಚ್ 6 ರಂದು ರಸ್ತೆ ಕಾಂಕ್ರಿಟ್, ಕಟ್ಟಡ ಇತರ ಅಭಿವೃದ್ಧಿ ಯೋಜನೆ ಉದ್ಘಾಟನೆ ಹಾಗೂ ಅದೇ ದಿನ ಮಹಿಳಾ ಗ್ರಾಮ ಸಭೆ ನಡೆಸಲು ತೀರ್ಮಾನಿಸಲಾಯಿತು. ಒಟ್ಟಿನಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಹಲವು ಚರ್ಚೆಗಳೊಂದಿಗೆ. ಸಾಮಾನ್ಯ ಸಭೆ ಸಂಜೆ 5 ರ ತನಕ ನಡೆಯಿತು ಸಭೆಯ ಕೊನೆಯಲ್ಲಿ ತಾಲೂಕು ಕಾರ್ಯ ನಿರ್ವಹಣಧಿಕಾರಿ ಯವರು ಆಗಮಿಸಿದ್ದರಿಂದ ಪರಿಣಾಮ ಸಭೆ ನಿಲ್ಲಿಸಲಾಯಿತು. ಕಲಾಪದಲ್ಲಿ ಭಾಗವಹಿಸಿದರು. ಕುಡಿಯುವ ನೀರಿನ ಸಮಸ್ಯೆ 9-11 ಸಮಸ್ಯೆ, ಉದ್ಯೋಗ ಖಾತ್ರಿ ಯೋಜನೆ, ಬಗ್ಗೆ ಅವರ ಗಮನಕ್ಕೆ ತರಲಾಯಿತು ಸಬೆಯಲ್ಲಿ ವಿಮಲಾ ಪ್ರಸಾದ್ ಲಿಸ್ಸಿ ಮೊನಾಲಿಸಾ ಸುಶೀಲಾ, ವಿಜಯಕುಮಾರ್. ಉಪಾಧ್ಯಕ್ಷರಾದ ಎಸ್. ಕೆ. ಹನೀಫ್ ಉಪಸ್ಥಿತರಿದ್ದರು