ಕಲ್ಮಡ್ಕ : ಶೆಟ್ಟಿಗದ್ದೆ -ಜೋಗಿಬೆಟ್ಟು -ಮಂಞನಕಾನ ರಸ್ತೆ ಕಾಂಕ್ರೀಟೀಕರಣ ಹಾಗೂ ಕಲ್ಮಡ್ಕ ಮರಾಠಿ ಭವನದ ವಿಸ್ತೃತ ಕಟ್ಟಡದ ಉದ್ಘಾಟನಾ ಸಮಾರಂಭ

0

ಕಲ್ಮಡ್ಕದಲ್ಲಿ ಶೆಟ್ಟಿಗದ್ದೆ -ಜೋಗಿಬೆಟ್ಟು -ಮಂಞನಕಾನ ರಸ್ತೆ ಕಾಂಕ್ರೀಟೀಕರಣ ಹಾಗೂ ಮರಾಠಿ ಭವನದ ವಿಸ್ತೃತ ಕಟ್ಟಡದ ಉದ್ಘಾಟನಾ ಸಮಾರಂಭ ಮಾ.3 ರಂದು ನಡೆಯಿತು.

ಶಾಸಕಿ ಭಾಗೀರಥಿ ಮುರುಳ್ಯರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬಿ.ಜೆ.ಪಿ ಬೆಳ್ಳಾರೆ ಶಕ್ತಿ ಕೇಂದ್ರದ ನೂತನ ಅಧ್ಯಕ್ಷ ಅಜಿತ್.ರಾವ್, ಕಾರ್ಯದರ್ಶಿ ಅನೂಪ್. ಬಿಳಿಮಲೆ, ಪೂರ್ವಾಧ್ಯಕ್ಷರಾಗಿದ ವಸಂತ ನಡುಬೈಲು ಅನುದಾನಗಳ ಬಗ್ಗೆ ತಿಳಿಸಿ , ಶುಭ ಹಾರೈಸಿದರು. ಸ್ಥಾನೀಯ ಸಮಿತಿಯ ಸಂಚಾಲಕ ರಮೇಶ್ ತಿಪ್ಪನಕಜೆ, ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಮಾಳಪ್ಪಮಕ್ಕಿ , ಮೀನಾಕ್ಷಿ ಬಾಲಕೃಷ್ಣ, ಮರಾಠಿ ಸಂಘದ ಅಧ್ಯಕ್ಷ ರವಿಚಂದ್ರ ಕಾಚಿಲ, ಮಹಿಳಾ ಸಂಘದ ಅಧ್ಯಕ್ಷೆ ಹೇಮಾವತಿ ರಾಮತ್ತಿಕಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು .

ಅನುದಾನ ಒದಗಿಸಿಕೊಡಲು ಸಹಕರಿಸಿದ ಸುಳ್ಯ ಮಂಡಲದ ಪೂರ್ವಾಧ್ಯಕ್ಷ ಹರೀಶ್ ಕಂಜಿಪಿಲಿಯವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ವೆಂಕಟ್ರಮಣ ಆಚಾರ್ಯ ಕಲ್ಮಡ್ಕ ಪ್ರಾರ್ಥಿಸಿದರು. ಬಿ.ಜೆ.ಪಿ ಸ್ಥಾನೀಯ ಸಮಿತಿ ಕಾರ್ಯದರ್ಶಿ ತೀರ್ಥಾನಂದ ಕಲ್ಮಡ್ಕ ಸ್ವಾಗತಿಸಿ, ಅಧ್ಯಕ್ಷೆ ನಳಿನಾಕ್ಷಿ ಕಲ್ಮಡ್ಕ ನಿರೂಪಿಸಿದರು ಮತ್ತು ವಂದಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಊರವರು ಪಾಲ್ಗೊಂಡಿದ್ದರು.