ಮಾ.10 ರಿಂದ 17: ಅರೆಕಲ್ಲು ಅಯ್ಯಪ್ಪ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ

0

ಕೊಡಗು ಸಂಪಾಜೆಯ ಅರೆಕಲ್ಲು ಅಯ್ಯಪ್ಪ ದೇವಸ್ಥಾನದ ವಾರ್ಷಿಕ ಜಾತ್ರೆಯು ಮಾ.10ರಿಂದ 17 ರವರೆಗೆ ನಡೆಯಲಿರುವುದು.

ಮಾ.10ರಂದು ಭಂಡಾರ ಬರುವುದು, ಮಾ.11ರಂದು ಭಂಡಾರ ಜಲಕ, ಮಾ.12- 14 ಬೆಳಗ್ಗಿನ ಜಾವ ಜಾತ್ರೆ, ಮಾ.14 ಸಾಯಂಕಾಲ ದೊಡ್ಡ ಜಾತ್ರೆ, ಮಾ.15 ರಂದು ಮಕ್ಕಳ ಫಲ ಕೊಡುವುದು, ಮಾ.16 ರಂದು ಪುರುಶರಾಯನ ಪೂಜೆ ಸಾಯಂಕಾಲ, ಮಾ.17 ರಂದು ಗಾಳಿಬೀಡಿಗೆ ಭಂಡಾರ ಹೋಗುವುದು. ಮಾ.12 ರಿಂದ 14 ರವರೆಗೆ ಬೆಳಗ್ಗಿನ ಜಾವ 2ರಿಂದ 7ಗಂಟೆವರೆಗೆ ಹರಕೆ ಒಪ್ಪಿಸಲು ಅವಕಾಶವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.