ಶ್ರೀಮತಿ ಭವಾನಿಯವರಿಗೆ ಜೆಸಿಐ ಸುಳ್ಯ ಪಯಸ್ವಿನಿಯ ‘ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್’ ಪುರಸ್ಕಾರ

0


ಜೆಸಿಐ ಸುಳ್ಯ ಪಯಸ್ವಿನಿಯು ವಿವಿಧ ವಿಭಾಗದಲ್ಲಿ ಸಾಧಕರನ್ನು ಗುರುತಿಸಿ ನೀಡುವ ದಿ ಸೈಲೆಂಟ್ ಸ್ಟಾರ್ ಪುರಸ್ಕಾರವನ್ನು ೨೩ ವರುಷಗಳಿಂದ ಸುಳ್ಯದ ತಾ.ಸರಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರರಾಗಿ ಸೇವೆಯನ್ನು ಸಲ್ಲಿಸುತ್ತಿರುವ ಸುಳ್ಯ ಹಳೆಗೇಟು ಹೊಸಗದ್ದೆ ನಿವಾಸಿ ಶ್ರೀಮತಿ ಭವಾನಿ ಇವರಿಗೆ ಸೈಲೆಂಟ್ ಸ್ಟಾರ್ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಉದ್ಯಮಿ ಸಾರಸ್ವತ ಕೆಫೆಯ ಮಾಲಕ. ರಾಧಾಕೃಷ್ಣ ನಾಯಕ್ ಜಯನಗರ ಸನ್ಮಾನವನ್ನು ನೆರವೇರಿಸಿ ಮಾತನಾಡಿದರು.
ಸುಳ್ಯ ಪಯಸ್ವಿನಿ ಘಟಕಾಧ್ಯಕ್ಷ ಗುರುಪ್ರಸಾದ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷರಾದ ನವೀನ್ ಕುಮಾರ ಉಪಸ್ಥಿತರಿದ್ದರು. ರಂಜಿತ್ ಕುಕ್ಕೆಟ್ಟಿ, ಅಭಿಷೇಕ್ ಗುತ್ತಿಗಾರು, ಅಶ್ವಿನಿ ಚೆಂಬು, ರಕ್ಷಿತ್, ಮೋನಿತ್ ಕುಮಾರ್ , ಲೋಕೇಶ್ , ನಂದನ್ ಮಂಜುನಾಥ್ ,ಮತ್ತು ನಾಗರಿಕರು ಉಪಸ್ಥಿತರಿದ್ದರು.