ಬೆಳ್ತಂಗಡಿ ತಾಲೂಕು ಕೆ.ಡಿ.ಪಿ. ಸದಸ್ಯರಾಗಿ ಜಗದೀಶ್ ಡಿ. ನೇಮಕ

0

ಬೆಳ್ತಂಗಡಿ ತಾಲೂಕು ಕೆ.ಡಿ.ಪಿ. ಸದಸ್ಯರಾಗಿ ಅಲ್ಲಿನ ನಗರ ಪಂಚಾಯತ್ ಸದಸ್ಯ ಜಗದೀಶ್ ಡಿ. ನೇಮಕಗೊಂಡಿದ್ದಾರೆ.
ಬೆಳ್ತಂಗಡಿ ನಗರ ಪಂಚಾಯತ್ ಸದಸ್ಯರಾಗಿ ಸತತ ನಾಲ್ಕು ಅವಧಿಗಳಿಂದ ಆಯ್ಕೆಯಾಗಿ ಬರುತ್ತಿರುವ ಜಗದೀಶ್ ರವರು ಮೂಲತ: ಸುಳ್ಯದ ದೇಂಗೋಡಿಯವರು. ಸುಮಾರು 40 ವರ್ಷಗಳಿಂದ ಬೆಳ್ತಂಗಡಿಯಲ್ಲಿ ನೆಲೆಸಿದ್ದು ಔಷಧಿ ಮಾರಾಟ ಮಳಿಗೆ ಹೊಂದಿದ್ದಾರೆ.