ಕರ್ನಾಟಕದಲ್ಲಿ 2 ಹಂತದಲ್ಲಿ ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟ

0

ದ.ಕ. ಉಡುಪಿ, ಕೊಡಗು ಸೇರಿ 14 ಕ್ಷೇತ್ರಗಳಿಗೆ ಎ. 26ರಂದು ಮತದಾನ

ಮೇ. 7 ಕ್ಕೆ ಕರ್ನಾಟಕದಲ್ಲಿ 2ನೇ ಹಂತದಲ್ಲಿ ಮತದಾನ : ಜೂ. 4ಕ್ಕೆ ಫಲಿತಾಂಶ

ಕೇಂದ್ರ ಚುನಾವಣಾ ಆಯೋಗ ಸುದ್ದಿಗೋಷ್ಠಿಯಲ್ಲಿ ಪ್ರಕಟ

ಕೇಂದ್ರ ಚುನಾವಣಾ ಆಯೋಗವು ಇದೀಗ ದೇಶದ ಸಾರ್ವತ್ರಿಕ ಲೋಕಸಭಾ ಚುನಾವಣೆಯ ದಿನಾಂಕ ಘೋಷಿಸಿದ್ದು, ದ.ಕ. ಉಡುಪಿ ಹಾಗೂ ಕೊಡಗು – ಮೈಸೂರು ಸೇರಿದಂತೆ ರಾಜ್ಯದ ೧೪ ಕ್ಷೇತ್ರಗಳಿಗೆ ಎ. ೨೬ರಂದು ಚುನಾವಣೆ ನಡೆಯಲಿದ್ದು, ಮಾ. ೨೮ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭಗೊಳ್ಳಲಿದ್ದು, ಎ. ೪ ಕೊನೆಯ ದಿನವಾಗಿದೆ. ಎ. ೫ರಿಂದ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಎ. ೮ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಮೇ. ೭ರಂದು ಕರ್ನಾಟಕದ ಉಳಿದ ೧೪ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಜೂ. ೪ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.