ಮಾ.23 : ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ್ಯ ಆದಿಬೈದೇರುಗಳ ನೇಮೋತ್ಸವ

0

ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ್ಯ ಆದಿಬೈದೆರುಗಳ ನೇಮೋತ್ಸವ ಮಾ.23 ರಂದು ನಡೆಯಲಿದೆ.ಮಾ.21 ರಂದು ಶ್ರೀ ಉಳ್ಳಾಕುಳ ನೇಮ ಮತ್ತು ಕಾಜು ಕುಜುಂಬ ನೇಮ ರಾತ್ರಿ ಗಂಟೆ 7-00ಕ್ಕೆ ಉಳ್ಳಾಕುಳ ಭಂಡಾರ ಹೊರಡುವುದು ಎಣ್ಮೂರು ಬೀಡಿನಿಂದ , ಬಳಿಕ ಕೈ ಕಾಣಿಕೆ , ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ . ಮಾ. 22 ರಂದು ಇಷ್ಟ ದೇವತೆ ನೇಮೋತ್ಸವ ರಾತ್ರಿ ಗಂಟೆ 7-15ಕ್ಕೆ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ . ಮಾ. 23ರಂದು ಬೆಳಿಗ್ಗೆ ಗಂಟೆ 8-00ಕ್ಕೆ ನಾಗ ತಂಬಿಲ , ಬಳಿಕ ಮುಹೂರ್ತ ತೋರಣ ಮಧ್ಯಾಹ್ನ ಗಂಟೆ 12-30ಕ್ಕೆ ಕಟ್ಟಬೀಡಿನಿಂದ ಪೂರ್ವ ಸಂಪ್ರದಾಯದಂತೆ ಭಂಡಾರ ಹೊರಡುವುದು, ನೇತ್ರಾದಿ ಗರಡಿಯಲ್ಲಿ ದರ್ಶನ, ರಾತ್ರಿ 8-00 ಕ್ಕೆ ಬೈದೇರುಗಳು ಗರಡಿ ಇಳಿಯುವುದು, ಬಳಿಕ ಕಿನ್ನಿದಾರು ಗರಡಿ ಇಳಿದು ರಂಗಸ್ಥಳ ಪ್ರವೇಶ, ಪ್ರಾತ:ಕಾಲ ಗಂಟೆ 3-30ಕ್ಕೆ ಎಣ್ಮೂರು ಕಟ್ಟಬೀಡಿಗೆ ಬೈದೇರುಗಳು ಹಾಲು ಕುಡಿಯಲು ಬಂದು ಬೀಡಿಗೆ ಕಾಣಿಕೆ ಅರ್ಪಿಸುವುದು, ಬೆಳಿಗ್ಗೆ ಗಂಟೆ 5-00ಕ್ಕೆ ಕೋಟಿ ಚೆನ್ನಯ್ಯರ ದರ್ಶನ ರಂಗಸ್ಥಳದಲ್ಲಿ ( ಸೇಟು) ಬೈದೇರುಗಳ ಸೇಟು ಬಳಿಕ ಬೈದೇರುಗಳಲ್ಲಿ ಅರಿಕೆ, ಗಂಧ ಪ್ರಸಾದ ಮತ್ತು ತುಲಾಭಾರ , ಮಧ್ಯಹ್ನ ಗಂಟೆ 12-30ಕ್ಕೆ ಎಣ್ಮೂರು ಕಟ್ಟಬೀಡಿನಿಂದ ಭಂಡಾರ ಹೊರಡುವುದು , ಮಧ್ಯಹ್ನ ಮತ್ತು ರಾತ್ರಿ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ರಾತ್ರಿ 10-30ಕ್ಕೆ ಸುಮಾ ಕೋಟೆ ಪಂಜ ಇವರಿಂದ “ಭಕ್ತಿ-ಭಾವಗೀತೆ” ಮತ್ತು ಬೆಳ್ಳಾರೆ ಮತ್ತು ಇತರ ಶಾಖೆಯ ವಿದ್ಯಾರ್ಥಿಗಳಿಂದ “ನೃತ್ಯ ಸಂಭ್ರಮ”-ಡ್ಯಾನ್ಸ್ & ಬೀಟ್ಸ್ ನೃತ್ಯ ಕಲಾಕೇಂದ್ರ ಕಾರ್ಯಕ್ರಮ ನಡೆಯಲಿದೆ.