ಐ ಪಿ ಎಲ್ ಉದ್ಘಾಟನಾ ಸಮಾರಂಭದಲ್ಲಿ ಕೇರಳ ರಾಜ್ಯದ ಕಲಾ ತಂಡಕ್ಕೆ ಮೇಕಪ್ ಮೆನ್ ಆಗಿ ಸುಳ್ಯದ ಲೋಕೇಶ್ ಕಟ್ಟಕೋಡಿ

0

ದೇಶದ ಬಹುದೊಡ್ಡ ಕ್ರಿಕೆಟ್ ಹಬ್ಬ ಐ ಪಿ ಎಲ್ 2024 ಇದೇ 22 ರಿಂದ ಚೆನೈನಲ್ಲಿ ಆರಂಭಗೊಳ್ಳಲಿದ್ದು ಉದ್ಘಾಟನಾ ಸಮಾರಂಭದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಕೇರಳ ರಾಜ್ಯದ ಕಲಾತಂಡದ ಮೇಕಪ್ ಮೆನ್ ಆಗಿ ಸುಳ್ಯ ತಾಲೂಕು ಮರ್ಕಂಜ ಗ್ರಾಮದ ಲೋಕೇಶ್ ಕಟ್ಟಕೋಡಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೇರಳ ರಾಜ್ಯ ಐ ಪಿ ಎಲ್ ಉದ್ಘಾಟನೆ ಸಂದರ್ಭ ಯಕ್ಷಗಾನ ನೃತ್ಯ ಪ್ರಕಾರವನ್ನು ಪ್ರದರ್ಶಿಸಲಿದ್ದು, ಕಾಸರಗೋಡು ಜಿಲ್ಲೆ ಇದರ ನೇತೃತ್ವ ವಹಿಸಲಿದೆ. ಮೂಲತ ಯಕ್ಷಗಾನ ಕಲಾವಿದರಾಗಿರುವ ಲೋಕೇಶ್ ಕಟ್ಟಕೋಡಿ ಈಗಾಗಲೇ ಚೆನೈನ ಚಿದಂಬರಂ ಕ್ರಿಕೆಟ್ ಸ್ಟೇಡಿಯಂನಲ್ಲಿ ಕೇರಳದ ನೃತ್ಯ ಕಲಾವಿದರಿಗೆ ತಾಲೀಮು ನೀಡುತ್ತಿದ್ದಾರೆ.

ಲೋಕೇಶ್ ಕಟ್ಟಕೋಡಿ ಈಗಾಗಲೇ ರಾಜ್ಯ – ಹೊರರಾಜ್ಯದ ಹಲವಾರು ಕಲಾ ತಂಡಗಳಿಗೆ ಮುಖವರ್ಣಿಕೆ ಕಲಾವಿದರಾಗಿ ಕೆಲಸ ಮಾಡುತ್ತಿದ್ದಾರೆ. ಸಿನೆಮಾ ಕಲಾವಿದರಿಗೂ ಮೇಕಪ್ ಮೆನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೇರಳ ಜೀ ಟಿವಿ ಯ ಡಾನ್ಸ್ ಕೇರಳಮ್ ಡಾನ್ಸ್ ಕಾರ್ಯಕ್ರಮದಲ್ಲೂ ಮೇಕಪ್ ಮೆನ್ ಆಗಿ ಕೆಲಸ ಮಾಡಿದ್ದರು.

ಲೋಕೇಶ್ ಕಟ್ಟಕೋಡಿಯವರು ದೇವಪ್ಪ ಹೈದಂಗೂರುರವರ ಸಹೋದರಿ ಶ್ರೀಮತಿ ಗಿರಿಜಾ ಹಾಗೂ ಅಣ್ಣು ಕಟ್ಟಕೋಡಿ ದಂಪತಿಗಳ ಪುತ್ರ.