ಕೂಜಿಮಲೆ: ಅಪರಿಚಿತ ಮಹಿಳೆ ಎ.ಎನ್.ಎಫ್. ವಶ

0

ಮಾನಸಿಕ ಅಸ್ವಸ್ಥೆಯೆಂಬ ಶಂಕೆ

ಕೂಜಿಮಲೆಯಲ್ಲಿ ನಿನ್ನೆ ಕಂಡು ಬಂದು ನಕ್ಸಲ್ ಮಹಿಳೆ ಎಂಬ ವದಂತಿಗೆ ಕಾರಣವಾಗಿದ್ದ ಅಪರಿಚಿತ ಮಹಿಳೆ ನಕ್ಸಲ್ ನಿಗ್ರಹ ಪಡೆಯ ಕೂಂಬಿಂಗ್ ವೇಳೆ ವಶ ವಾಗಿರುವುದಾಗಿ ತಿಳಿದು ಬಂದಿದೆ.

ನಿನ್ನೆ ಪರಿಚಿತಳಾದ ಈ ಮಹಿಳೆ ಒಬ್ಬಳೇ ನಡೆದುಕೊಂಡು ಹೋಗುತ್ತಿದ್ದುದನ್ನು ಕೆಲವರು ನೋಡಿದ್ದರು. ಕೂಜಿಮಲೆಯಲ್ಲಿ ಹಾಗೂ ಐನೆಕಿದು ಬಳಿ ಕೆಲವು ದಿನಗಳ ಹಿಂದೆ ನಕ್ಸಲರು ಬಂದಿದ್ದ ಹಿನ್ನೆಲೆಯಲ್ಲಿ ಈಕೆ ನಕ್ಸಲ್ ತಂಡದ ಸದಸ್ಯಳಾಗಿರಬಹುದೆಂಬ ಗುಮಾನಿಯ ಆಧಾರದಲ್ಲಿ ನಕ್ಸಲ್ ನಿಗ್ರಹ ಪಡೆಯಿಂದ ಕೂಂಬಿಂಗ್ ಕಾರ್ಯಾಚರಣೆ ಚುರುಕುಗೊಂಡಿತ್ತು. ಇಂದು ಮಧ್ಯಾಹ್ನ ಆ ಅಪರಿಚಿತ ಮಹಿಳೆಯನ್ನು ಎ.ಎನ್.ಎಫ್. ನವರು ಪತ್ತೆ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಈಕೆ ಮಾನಸಿಕ ಅಸ್ವಸ್ಥ ಮಹಿಳೆ ಎಂದು ಕೂಡಾ ಹೇಳಲಾಗುತ್ತಿದ್ದು, ತನಿಖೆಯ ವೇಳೆ ಈ ಅಂಶ ದೃಢಪಟ್ಟಿರುವುದಾಗಿಯೂ ತಿಳಿದುಬಂದಿದೆ.