ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯಕ್ಕೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿಯ ಮೌಲ್ಯಮಾಪನದಲ್ಲಿ ‘ A ‘ ಗ್ರೇಡ್

0
      ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧೀನ ಕೊಳಪಟ್ಟ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯಕ್ಕೆ 2024ನೇ ಮಾ. 13 ಮತ್ತು 14 ರಂದು ರಾಷ್ಟ್ರೀಯ ಮೌಲ್ಯಮಾಪನ ಮತ್ತು  ಮಾನ್ಯತೆ ಮಂಡಳಿಯ ( NAAC)   ತಂಡವು ಭೇಟಿ ನೀಡಿ ಮೌಲ್ಯಮಾಪನ ಪ್ರಕ್ರಿಯೆ ನಡೆಸಿರುತ್ತದೆ.

ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗದ ನಿಯಮಾನುಸಾರ ಉನ್ನತ ಶಿಕ್ಷಣ ಸಂಸ್ಥೆಗಳು ಪ್ರತಿ ಐದು ವರ್ಷಗಳಿಗೊಮ್ಮೆ ಗುಣಮಟ್ಟ ಮೌಲ್ಯಮಾಪನ ಕ್ಕೊಳಗಾಗಬೇಕಾದದ್ದು ಕಡ್ಡಾಯವಾಗಿದ್ದು. ಸಂಸ್ಥೆಯ ಕಳೆದ ಎರಡು ಬಾರಿ NAAC ಮೌಲ್ಯಮಾಪನ ಕೊಡಪಟ್ಟು ‘B’ ಗ್ರೇಡ್ ಪಡೆದಿರುತ್ತದೆ. ಪ್ರಸ್ತುತ ಮೂರನೇ ಸಲದ ಮೌಲ್ಯಮಾಪನದಲ್ಲಿ ‘A’ ಗ್ರೇಡ್ ಪಡೆದಿರುವುದಾಗಿ ತಿಳಿದು ಬಂದಿದೆ.