ಬಾನಡ್ಕ ಕಿ.ಪ್ರಾ.ಶಾಲಾ ಹಿರಿಯ ವಿದ್ಯಾರ್ಥಿ ಸಂಘ ರಚನೆ

0

ಅಧ್ಯಕ್ಷರಾಗಿ ಚಂದ್ರಶೇಖರ ನಾಯರ್, ಕಾರ್ಯದರ್ಶಿಯಾಗಿ ಶ್ರೀಮತಿ ಗೀತಾ ಪಿ.

ಏನೆಕಲ್ಲಿನ ಬಾನಡ್ಕ ಕಿರಿಯ ಪ್ರಾಥಮಿಕ ಶಾಲಾ ಹಿರಿಯ ವಿದ್ಯಾರ್ಥಿ ಸಂಘ ರಚನೆಯಾಗಿದ್ದು ಅಧ್ಯಕ್ಷರಾಗಿ ಚಂದ್ರಶೇಖರ ನಾಯರ್ ಅವರನ್ನು ಆಯ್ಕೆಮಾಡಲಾಗಿದೆ. ಕಾರ್ಯದರ್ಶಿಯಾಗಿ ಶ್ರೀಮತಿ ಗೀತಾ ಪಿ. ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಜಗದೀಶ್ ಅರಮನೆ ಮಜಲು, ಜೊತೆ ಕಾರ್ಯದರ್ಶಿಯಾಗಿ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಾನಕಿ ಕೆ, ಕ್ರೀಡಾ ಕಾರ್ಯದರ್ಶಿಯಾಗಿ ರತಿನ್ ಪದ್ನಡ್ಕ, ಕೋಶಾಧಿಕಾರಿಯಾಗಿ ವಾಸುದೇವ ಪೂಜಾರಿ ಮನೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಚಿನ್ ಕುಕ್ಕಪ್ಪನ ಮನೆ, ಸದಸ್ಯರುಗಳಾಗಿ ರಾಮಚಂದ್ರ ಗುಂಡಗದ್ದೆ, ಜನಾರ್ಧನ ಗೌಡ ಕಟ್ಟ, ಶ್ರೀಮತಿ ಯಮುನಾ ಪುಂಡಿಗದ್ದೆ, ಶ್ರೀಮತಿ ಚಿತ್ರಲತಾ ತುಂಭತ್ತಾಜೆ, ಪರಮೇಶ್ವರ ಬಾನಡ್ಕ, ಶ್ರೀಮತಿ ಪ್ರತಿಮಾ ಪದ್ಮಡ್ಕ, ವಿಶ್ವನಾಥ ಬಾಲಾಡಿ, ವಿನಯ ನೆಕ್ರಾಜೆ, ರಮೇಶ ಪದ್ನಡ್ಕ ಆಯ್ಕೆಯಾಗಿದ್ದಾರೆ.